ಬ್ರಹ್ಮಾವರ: ಬಾದಾಮಿ ಮೂಲದ ಬಾಲ ಕಾರ್ಮಿಕನ ರಕ್ಷಣೆ
Update: 2018-11-02 20:27 IST
ಉಡುಪಿ, ನ.2: ಉಡುಪಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೋಲೀಸ್ ಇಲಾಖೆ, ಬ್ರಹ್ಮಾವರ ಠಾಣೆ ಇವರ ಜಂಟಿ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಆಕಾಶವಾಣಿ ಸಮೀಪದ ಬಾರ್ ಒಂದರಲ್ಲಿ ಕೆಲಸಕ್ಕಿದ್ದ ಬಾದಾಮಿ ಮೂಲದ 12 ವರ್ಷದ ಬಾಲ ಕಾರ್ಮಿಕನನ್ನು ರಕ್ಷಿಸಿ, ಪುನರ್ವಸತಿಗಾಗಿ ನಿಟ್ಟೂರಿನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಉಡುಪಿ 2ನೇ ವೃತ್ತದ ಪ್ರಬಾರ ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ ಡಿ.ಎಸ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂದ ಯೋಜನಾ ನಿರ್ದೇಶಕ ಪ್ರಭಾಕರ್ ಆಚಾರ್, 1ನೇ ವೃತ್ತದ ಪ್ರಬಾರ ಕಾರ್ಮಿಕ ನಿರೀಕ್ಷಕ ಪ್ರವೀಣ್‌ಕುಮಾರ್, ಬ್ರಹ್ಮಾವರ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕಿ ಶಾಲಿನಿ ಕೆ, ಬ್ರಹ್ಮಾವರ ಪೋಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಗಣೇಶ್, ಸುರೇಶ್ ಭಾಗವಹಿಸಿದ್ದರು.