ಉಡುಪಿ: ನಾತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ
ಉಡುಪಿ, ನ.2: ಕಳೆದ ಅ.24ರಂದು ಉಡುಪಿಯಿಂದ ನಿಟ್ಟೂರಿನಲ್ಲಿರುವ ಮನೆಗೆ ತೆರಳುವ ವೇಳೆ ನಾಪತ್ತೆಯಾಗಿದ್ದ ಹೊನ್ನಪ್ಪ ಎಂಬವರ ಪತ್ನಿ ಲಕ್ಷವ್ವ (43) ಅವರ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಗುರುವಾರ ಬೆಳಗ್ಗೆ ಕಾಡುಬೆಟ್ಟು ಸಿಟಿ ಆಸ್ಪತ್ರೆಯ ಬಳಿಯ ಖಾಲಿ ಜಾಗದಲ್ಲಿ ಪತ್ತೆಯಾಗಿದೆ.
ಪುತ್ತೂರು ಗ್ರಾಮದ ನಿಟ್ಟೂರು ಶನೇಶ್ವರ ದೇವಸ್ಥಾನದ ಬಳಿಯಲ್ಲಿ ಜೋಪಡಿಯಲ್ಲಿ ವಾಸವಿದ್ದ ಲಕ್ಷ್ಮವ್ವ, ನಗರದ ಚಿತ್ತರಂಜನ್ ಸರ್ಕಲ್‌ನಲ್ಲಿರುವ ಹೊಟೇಲ್ ಒಂದರಲ್ಲಿ ಕೆಲಸ ಮಾಡುತಿದ್ದು, ಅ.24ರಂದು ಸಂಜೆ 6ಕ್ಕೆ ಕೆಲಸ ಮುಗಿಸಿ ಮನೆಗೆ ತೆರಳಿದ್ದು, ಮನೆಗೆ ತಲುಪದೇ ನಾಪತ್ತೆಯಾಗಿದ್ದರು. ಪುತ್ತೂರು ಗ್ರಾಮದ ನಿಟ್ಟೂರು ಶನೇಶ್ವರ ದೇವಸ್ಥಾನದ ಬಳಿಯಲ್ಲಿ ಜೋಪಡಿಯಲ್ಲಿ ವಾಸವಿದ್ದ ಲಕ್ಷ್ಮವ್ವ, ನಗರದ ಚಿತ್ತರಂಜನ್ ಸರ್ಕಲ್‌ನಲ್ಲಿರುವ ಹೊಟೇಲ್ ಒಂದರಲ್ಲಿ ಕೆಲಸ ಮಾಡುತಿದ್ದು, ಅ.24ರಂದು ಸಂಜೆ 6ಕ್ಕೆ ಕೆಲಸ ಮುಗಿಸಿ ಮನೆಗೆ ತೆರಳಿದ್ದು, ಮನೆಗೆ ತಲುಪದೇ ನಾಪತ್ತೆಯಾಗಿದ್ದರು. ಲಕ್ಷವ್ವ ಕಾಡುಬೆಟ್ಟು ಕಾಲುದಾರಿಯಲ್ಲಿ ಕತ್ತಲೆಯಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಕುಸಿದು ಬಿದ್ದು ಮೃತಪಟ್ಟಿರಬಹುದು ಎಂದು ಪ್ರಕರಣ ದಾಖಲಿಸಿಕೊಂಡಿರುವ ಉಡುಪಿ ನಗರ ಪೊಲೀಸ್ ತಿಳಿಸಿದ್ದಾರೆ.