×
Ad

ಮಂಗಳೂರು: ಅಕ್ರಮ ಮರಳು ದಾಸ್ತಾನು ಪತ್ತೆ

Update: 2018-11-02 23:05 IST

ಮಂಗಳೂರು, ನ.2: ಕಸಬಾ ಬೆಂಗರೆಯಲ್ಲಿ ಅನಧಿಕೃತವಾಗಿ ದಾಸ್ತಾನಿರಿಸಿದ 20 ಲೋಡ್ ಮರಳನ್ನು ಪಣಂಬೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಸಬಾ ಬೆಂಗರೆ ಗ್ರಾಮಕ್ಕೆ ಸಂಬಂಧಪಟ್ಟ ಬೀಟ್ ಅಧಿಕಾರಿ ಎಎಸ್ಸೈ ಪುರಂದರ ಗೌಡ ಮತ್ತು ಎಚ್.ಸಿ. ಶೈಲೆಂದ್ರ ಬೀಟ್ ಕರ್ತವ್ಯದಲ್ಲಿದ್ದಾಗ ಕಸಬಾ ಬೆಂಗರೆಯ ಅಕ್ಷಯ ಕಾರ್ಪೊರೇಶನ್ ಎಂಬಲ್ಲಿ ಅನಧಿಕೃತವಾಗಿ 20ಲೋಡ್ ಮರಳನ್ನು ದಾಸ್ತಾನು ಇರಿಸಿದ್ದರು. ಇದಕ್ಕೆ ಪಣಂಬೂರು ಠಾಣಾ ಇನ್‌ಸ್ಪೆಕ್ಟರ್ ರಫೀಕ್ ಕೆ.ಎಂ. ಸೂಚನೆ ಮೇರೆಗೆ ದಾಳಿ ನಡೆಸಿದ ಪೊಲೀಸರು ಮರಳು ವಶಪಡಿಸಿಕೊಂಡು ಮುಂದಿನ ಕ್ರಮಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News