‘ಆವಿಷ್ಕಾರ್’: ಶಿರಸಿ ಮಾರಿಕಾಂಬ ಸರಕಾರಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

Update: 2018-11-03 14:39 GMT

ಶಿರ್ವ, ನ. 3: ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರಕನ್ನಡ ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಿಜ್ಞಾನ ರಸಪ್ರಶ್ನೆ, ವಿಜ್ಞಾನ ಭಿತ್ತಿಚಿತ್ರ ತಯಾರಿ, ವಿಜ್ಞಾನ ಮಾದರಿಗಳ ಪ್ರದರ್ಶನ ಮತ್ತು ಸ್ಪರ್ಧೆ ‘ಆವಿ ಷ್ಕಾರ್’ನಲ್ಲಿ ಶಿರಸಿ ಮಾರಿಕಾಂಬ ಸರಕಾರಿ ಪದವಿಪೂರ್ವ ಕಾಲೇಜು ಸಮಗ್ರ ಮತ್ತು ಉಡುಪಿ ಎಂಜಿಎಂ ಪದವಿಪೂರ್ವ ಕಾಲೇಜು ರನ್ನರ್ ಆಫ್ ಪ್ರಶಸ್ತಿ ಗೆದ್ದುಕೊಂಡಿತು.

ವೈಜ್ಞಾನಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಪ್ರಥಮ, ಉಡುಪಿ ಎಂಜಿಎಂ ಕಾಲೇಜು ದ್ವಿತೀಯ, ಅದಮಾರು ಪಿಪಿಸಿ ತೃತೀಯ, ವಿಜ್ಞಾನ ಭಿತ್ತಿಚಿತ್ರ ತಯಾರಿ ಸ್ಪರ್ಧೆಯಲ್ಲಿ ಮಂಗಳೂರು ಶಾರದಾ ಕಾಲೇಜು ಪ್ರಥಮ, ಉಡುಪಿ ಎಂಜಿಎಂ ದ್ವಿತೀಯ, ನೆಲ್ಲಿಕಟ್ಟೆ ಜ್ಞಾನಗಂಗಾ ಕಾಲೇಜು ತೃತೀಯ, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಶಿರಸಿ ಮಾರಿ ಕಾಂಬ ಪ್ರಥಮ, ನಿಟ್ಟೆ ಡಾಎನ್‌ಎಸ್‌ಎಎಂ ಕಾಲೇಜು ದ್ವಿತೀಯ, ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜು ತೃತೀಯ ಸ್ಥಾನ ಪಡೆಯಿತು.

ನ.2ರಂದು ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಭಾಸ್ಕರ್ ಹಂದೆ, ಮಂಗಳೂರಿನ ಎಕ್ಸ್‌ಪರ್ಟ್ ಶಿಕ್ಷಣ ಮತ್ತು ಚಾರಿಟೇಬಲ್ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಪ್ರಭಾ ನಾಯಕ್ ಮಾತನಾಡಿದರು.

ಡಾ.ರಮೇಶ್ ಭಟ್, ಪ್ರೊ.ವೆಂಕಟೇಶ್ ಭಟ್, ಪ್ರೊ.ಭಾಸ್ಕರ್ ಆಚಾರ್ಯ, ನಟರಾಜ್ ಉಪಾಧ್ಯ ತೀರ್ಪುಗಾರರಾಗಿ ಸಹಕರಿಸಿದರು. ಸೋದೆ ಮಠದ ದಿವಾನ ಶ್ರೀನಿವಾಸ ತಂತ್ರಿ, ಕಾರ್ಯದರ್ಶಿ ರತ್ನಕುಮಾರ್, ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ್ ಭಟ್ ಉಪಸ್ಥಿತರಿದ್ದರು. ಪ್ರಾಧ್ಯಾಪಕ ರಾಜೇಶ್ ನಾಯಕ್ ಸ್ವಾಗತಿಸಿ, ಪ್ರಾಧ್ಯಾಪಕ ವೇಣುಗೋಪಾಲ್ ರಾವ್ ವಂದಿಸಿದರು. ಸಮನ್ವಿತಾ ಭಾಗವತ್ ಮತ್ತು ಸೂರ್ ಶೇಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News