×
Ad

‘ಕರೆ ಮಾಡಿ ಪುಸ್ತಕ ಗೆಲ್ಲಿರಿ’ ವಿನೂತನ ಕಾರ್ಯಕ್ರಮ

Update: 2018-11-03 20:11 IST

ಉಡುಪಿ, ನ. 3: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಹತ್ತರ ಸಂಭ್ರಮದ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಫೋನ್ ಕರೆ ಮಾಡಿ ಪುಸ್ತಕ ಗೆಲ್ಲಿರಿ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 ನ.6ರಿಂದ 10ರವರೆಗೆ ಪ್ರತಿದಿನ ಸಂಜೆ 6ಗಂಟೆಯಿಂದ ಸಂಜೆ 7:30ರ ಅವಧಿಯಲ್ಲಿ ಮೊಬೈಲ್ ಸಂಖ್ಯೆ 8710978493ಕ್ಕೆ ಕರೆ ಮಾಡಿ ಕನ್ನಡ ನಾಡು- ನುಡಿ- ಸಂಸ್ಕೃತಿ- ಇತಿಹಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಗೆಲ್ಲಬಹುದಾಗಿದೆ. ಕನ್ನಡ ಸಾಹಿತಿಗಳ 25ಕ್ಕೂ ಹೆಚ್ಚು ಹೆಸರುಗಳನ್ನು ವೇಗ ವಾಗಿ ನಿಗದಿತ ಸಮಯದಲ್ಲಿ ಹೇಳುವವರಿಗೂ ಬಹುಮಾನ ನೀಡಲಾಗುವುದು. ಮೂರಕ್ಕಿಂತ ಹೆಚ್ಚಿನ ಬಹುಮಾನ ಗಳಿಸಿದರೆ ಅವರಿಗೆ ಸಮ್ಮೇಳನದಲ್ಲಿ ಬಹು ಮಾನವನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News