ಭತ್ತದ ಕಟಾವು ಮಾಡಿ ಸಂಭ್ರಮಿಸಿದ ವಿದ್ಯಾರ್ಥಿಗಳು
ಉಡುಪಿ, ನ.3: ನಿಟ್ಟೂರು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಕಕ್ಕುಂಜೆಯ ಚಂದ್ರಶೇಖರ ನಾಯ್ಕರ ಗದ್ದೆಯಲ್ಲಿ ತಾವೇ ನೇಜಿ ನೆಟ್ಟ ಭತ್ತದ ಫಸಲನ್ನು ಕಟಾವು ಮಾಡಿ ಹೊರೆ ಹೊತ್ತು ಮನೆಯ ಅಂಗಳಕ್ಕೆ ತಂದು ಪಡಿಮಂಚಕ್ಕೆ ಬಡಿದು ಸಂಭ್ರಮಿಸಿದರು.
ನಾವು ತಿನ್ನುವ ಅನ್ನದ ಹಿಂದಿನ ರೈತರ ಶ್ರಮವನ್ನು ವಿದ್ಯಾರ್ಥಿಗಳು ಸ್ವತ: ತಾವೇ ಅನುಭವಿಸಿ ಅರ್ಥ ಮಾಡಿಕೊಳ್ಳುವ ಉದ್ದೇಶ ಹಾಗೂ ತಾವು ತಿನ್ನುವ ಆಹಾರ ಪದಾರ್ಥಗಳನ್ನು ವ್ಯರ್ಥಮಾಡಬಾರದೆಂಬ ಜಾಗೃತಿ ಮೂಡಿಸುವು ದಕ್ಕಾಗಿ ಇಂಥ ಒಂದು ಪ್ರಯತ್ನವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಮುರಲಿ ಕಡೆಕಾರ್ ನಡೆಸಿದ್ದರು.
ಮುರಲಿ ಕಡೆಕಾರ್ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಈ ಕಾರ್ಯಕ್ರಮ ದಲ್ಲಿ ಶಾಲಾ ಶಿಕ್ಷಕರುಗಳಾದ ಅನಸೂಯ, ಎಚ್.ಎನ್.ಶೃಂಗೇಶ್ವರ, ಅಶೋಕ ಎಂ., ರಾಮದಾಸ, ಸೀಮಾ, ನಮಿತಾಶ್ರೀ, ುಂಜುನಾಥ, ದೀಪಾ ಭಾಗವಹಿಸಿದ್ದರು.
ಕಳೆದ 4 ವರ್ಷಗಳಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೃಷಿ ಚಟುವಟಿಕೆಯ ಸಮಗ್ರ ಅನುಭವದ ಪಾಠವನ್ನು ಈ ಶಾಲೆಯ ವಿದ್ಯಾರ್ಥಿಗಳಿಗೆ ನೀಡಲಾಗುತಿದ್ದು, ಇದಕ್ಕೆ ವಿದ್ಯಾರ್ಥಿಗಳಿಂದಲೂ ಉತಾ್ಸಹದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.