ಕನಸುಗಳನ್ನು ನನಸಾಗಿಸಿದ ತಂತ್ರಜ್ಞಾನ: ಡಾ.ಕೆ.ವಿ.ರಾವ್
Update: 2018-11-03 22:26 IST
ಮೂಡುಬಿದಿರೆ, ನ. 3: ತಂತ್ರಜ್ಞಾನ ಇಂದು ವೇಗವಾಗಿ ಬದಲಾಗುತ್ತಲೇ ಇದೆ. ನಾವು ಹಿಂದೆ ಕನಸು ಕಂಡಿದ್ದೆಲ್ಲವೂ ಇಂದು ತಂತ್ರಜ್ಞಾನದ ಕೊಡುಗೆಯಾಗಿ ನಮ್ಮ ಮುಂದಿದೆ. ನಾವಿಂದು ನಮ್ಮ ಸವಾಲುಗಳಿಗೆಲ್ಲವೂ ಪರಿಹಾರಕ್ಕಾಗಿ ತಂತ್ರಜ್ಞಾನದ ಮೊರೆ ಹೋಗುತ್ತಿದ್ದೇವೆ ಎಂದು ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಡಾ.ಕೆ.ವಿ.ರಾವ್ ಹೇಳಿದರು.
ಅವರು ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನಾ ಚರಣೆಯ ಅಂಗವಾಗಿ ನಡೆದ ಯೆನ್‍ಕ್ವೆಸ್ಟ್-2018 ಉದ್ಘಾಟಿಸಿ ಮಾತನಾಡಿದರು. ಎಂದವರು ಹೆಳಿದರು.
ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಜಿ.ಡಿಸೋಜಾ ಸ್ವಾಗತಿಸಿದರು. ಶ್ರೀಮತಿ ಸಷ್ಮಾ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದ ಸಮನ್ವಯಕಾರ ಮೋಹಿತ್ ಪ್ರಸನ್ನ ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.