ಮೋದಿ ಸಿಬಿಐ, ಆರ್ ಬಿಐನಂತಹ ರಾಷ್ಟ್ರೀಯ ಸಂಸ್ಥೆಗಳನ್ನು ನುಂಗುತ್ತಿರುವ ‘ಅನಕೊಂಡ’

Update: 2018-11-04 08:50 GMT

ಹೊಸದಿಲ್ಲಿ, ನ.4: "ಪ್ರಧಾನಿ ನರೇಂದ್ರ ಮೋದಿ ‘ಅನಕೊಂಡ’ ಇದ್ದಂತೆ; ಸಿಬಿಐ, ಆರ್‍ಬಿಐ ಹೀಗೆ ಒಂದೊಂದೇ ರಾಷ್ಟ್ರೀಯ ಸಂಸ್ಥೆಗಳನ್ನು ನುಂಗುತ್ತಿದ್ದಾರೆ. ಅವರು ಹೇಗೆ ಸಂರಕ್ಷಕರಾಗಲು ಸಾಧ್ಯ" ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಯನಮಲ ರಾಮಕೃಷ್ಣಡು ನೀಡಿರುವ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ವಿರೋಧ ಪಕ್ಷವಾದ ವೈಎಸ್‍ಆರ್ ಕಾಂಗ್ರೆಸ್ ಮತ್ತು ಜನಸೇನಾ ಮೇಲೆ ವಾಗ್ದಾಳಿ ನಡೆಸಿರುವ ಅವರು, ಅಧಿಕಾರಕ್ಕಾಗಿ ಹಾತೊರೆಯುವ ಇವರಿಗೆ ದೇಶದ ಬಗ್ಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂದು ಟೀಕಿಸಿದ್ದಾರೆ.

"ಆದ್ದರಿಂದ ಈ ಎರಡು ಪಕ್ಷಗಳು, ರಾಷ್ಟ್ರೀಯ ಸಂಸ್ಥೆಗಳನ್ನು ಹಾಗೂ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿರುವ ಮೋದಿಗೆ ಬೆಂಬಲ ನೀಡುತ್ತಿವೆ" ಎಂದು ಅವರು ಹೇಳಿದ್ದಾರೆ.

ಸಚಿವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕನ್ನ ಲಕ್ಷ್ಮೀನಾರಾಯಣ ಅವರು, "ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಭ್ರಷ್ಟಾಚಾರದ ರಾಜ" ಎಂದು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News