ಮಂಗಳೂರು: ಸಾರ್ವಜನಿಕವಾಗಿ ಟಿಪ್ಪು ಜಯಂತಿ ಆಚರಣೆಗೆ ಅನುವು
Update: 2018-11-04 19:01 IST
ಮಂಗಳೂರು, ನ.4: ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ದ.ಕ. ಜಿಲ್ಲಾ ಘಟಕದ ನಿಯೋಗವು ಇತ್ತೀಚೆಗೆ ಮಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ರಾಜ್ಯ ಸರಕಾರದ ಆದೇಶದಂತೆ ನ.10ರಂದು ನಡೆಯಲಿರುವ ಹಝ್ರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲು ಅನುವುಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿತು.
ವೇದಿಕೆಯ ಜಿಲ್ಲಾಧ್ಯಕ್ಷ ಎಚ್. ಇಸ್ಮಾಯೀಲ್ ಶಾಫಿ ಬಬ್ಬುಕಟ್ಟೆ, ಉಪಾಧ್ಯಕ್ಷರಾದ ವಿಷ್ಣು ಮೂರ್ತಿ ಭಟ್, ಅಬೂಬಕರ್ ಪಲ್ಲಮಜಲು, ಟಿ. ಅಬ್ಬಾಸ್, ಪ್ರಧಾನ ಕಾರ್ಯದರ್ಶಿ ಎನ್.ಎಸ್.ನಿಸಾರ್ ಮಾರಿಪಲ್ಲ, ಸಂಘಟನಾ ಕಾರ್ಯದರ್ಶಿ ಯೂಸುಫ್ ಉಚ್ಚಿಲ, ಮಾಧ್ಯಮ ವಕ್ತಾರ ಸೋಶಿಯಲ್ ಫಾರೂಕ್ ತಲಪಾಡಿ, ಯುವ ಘಟಕದ ಜಿಲ್ಲಾಧ್ಯಕ್ಷ ಗಣೇಶ್ ಪೂಜಾರಿ ಕದ್ರಿ, ವಿವಿಧ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಮುಹಮ್ಮದ್ ಶರೀಫ್ ಪಾಂಡೇಶ್ವರ, ಟಿ.ಬಿ. ನವಾಝ್, ನೂರ್ ಮುಹಮ್ಮದ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.