ಬೆಂಗರೆ: ಎಸೆಸ್ಸೆಫ್ ಯುನಿಟ್ ಕಾರ್ಯಕ್ರಮ
Update: 2018-11-04 19:05 IST
ಮಂಗಳೂರು, ನ.4: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್‌ನ ಬೆಂಗರೆ ಶಾಖೆಯ ವತಿಯಿಂದ ಯುನಿಟ್ ಸಮಾವೇಶವು ಮರ್ಕಝುನ್ನೂರ್ ಸುನ್ನಿ ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಎಸ್‌ವೈಎಸ್ ನಾಯಕ ಬಿ.ಎ.ಹಮೀದ್ ಬೆಂಗರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದ್‌ರ್ ಮುಅಲ್ಲಿಂ ಅಬ್ದುರ್ರಹ್ಮಾನ್ ಝುಹ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಡಿವಿಜನ್ ಎಸೆಸ್ಸೆಫ್ ಅಧ್ಯಕ್ಷ ಜುನೈದ್ ಸಅದಿ ‘ಯೌವ್ವನ ಮರೆಯಾಗುವ ಮುನ್ನ’ ವಿಷಯದಲ್ಲಿ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಶರೀಫ್ ಸಅದಿ ಬೆಂಗರೆ, ಇಸಾಕ್ ತಂಙಳ್ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಕಂಝುಲ್ ಉಲಮಾ, ಒಕೆ ಉಸ್ತಾದ್, ಮುಹ್ಸಿನ್ ಕೆ.ಸಿ.ನಗರ ಅವರ ಹೆಸರಿನಲ್ಲಿ ತಹ್‌ಲೀಲ್ ಸಮರ್ಪಿಸಲಾಯಿತು. ಹುಸೈನ್ ಬೆಂಗರೆ ಸ್ವಾಗತಿಸಿದರು. ಅಲ್ತಾಫ್ ಬೆಂಗರೆ ವಂದಿಸಿದರು.