ಅಜ್ಜಿನಡ್ಕ : ಯು.ಟಿ.ಖಾದರ್ ಬಳಗದಿಂದ ವೈದ್ಯಕೀಯ ಶಿಬಿರ

Update: 2018-11-04 14:08 GMT

ಉಳ್ಳಾಲ, ನ.4: ಕೋಟೆಕಾರ್ ಸಮೀಪದ ಕೆ.ಸಿ.ರೋಡ್ ಬಳಿಯ ಅಜ್ಜಿನಡ್ಕ ಯು.ಟಿ.ಖಾದರ್ ಅಭಿಮಾನಿ ಬಳಗ, ದೇರಳಕಟ್ಟೆ ರೋಟರಿ ಕ್ಲಬ್ ಹಾಗೂ ಯೆನೆಪೊಯ ವೈದ್ಯಕೀಯ ಮತ್ತು ದಂತ ಕಾಲೇಜಿನ ಸಹಭಾಗಿತ್ವದಲ್ಲಿ ಅಜ್ಜಿನಡ್ಕ ಶಾಲೆಯಲ್ಲಿ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ರವಿವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮುಳ್ಳುಗುಡ್ಡೆ ಅಲ್ ಹಿದಾಯ ಜುಮಾ ಮಸೀದಿ ಅಧ್ಯಕ್ಷ ಎನ್.ಎಸ್.ಉಮ್ಮರ್ ಮಾಸ್ಟರ್ ‘ಇಂದು ನಾವು ಸೇವಿಸುವ ಅನಗತ್ಯ ಆಹಾರ, ಅನಗತ್ಯ ನಿದ್ದೆ ಸಹಿತ ಇಂದಿನ ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಉತ್ತಮ ಆರೋಗ್ಯ ಎನ್ನುವುದು ಸುಲಭವಾಗಿ ಸಿಗುವ ವಸ್ತುವಲ್ಲ, ಮನುಷ್ಯ ಆರೋಗ್ಯವಂತನಾಗಿರಬೇಕಾದರೆ ಮಾನಸಿಕ, ದೈಹಿಕ ನೆಮ್ಮದಿಯೂ ಅಗತ್ಯ, ಸಾಮಾಜಿಕವಾಗಿ ತೊಡಗಿಸಿಕೊಂಡಾಗ ಇಂತಹ ಅವಕಾಶ ಸಿಗಲು ಸಾಧ್ಯ ಎಂದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಆಲ್ವಿನ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ ಆಂಚನ್, ಕಾರ್ಯದರ್ಶಿ ಜಯಪ್ರಕಾಶ್, ಯೆನೆಪೊಯ ವೈದ್ಯಕೀಯ ಕಾಲೇಜಿನ ಡಾ.ಪೂನಂ ನಾಯಕ್, ಕೋಟೆಕಾರ್ ಪ.ಪಂ. ಸದಸ್ಯರಾದ ಹಮೀದ್ ಹಸನ್ ಮಾಡೂರು, ಮೊಯ್ದಿನ್ ಬಾವ, ಡಿ.ಎಂ.ಅಸ್ಲಂ, ಪ್ರಮುಖರಾದ ಉಮೇಶ್ ಗಾಂಭೀರ್, ಸುಲೈಮಾನ್, ಮುಹಮ್ಮದ್ ಬಾವ, ಎಸ್.ಬಿ.ಮುಹಮ್ಮದ್ ಹನೀಫ್, ಎಚ್.ಇಬ್ರಾಹಿಂ, ಕೆ.ಎಸ್.ಶಬೀರ್, ಯು.ಬಿ.ರಶೀದ್, ಕಾರ್ಯಕ್ರಮ ಸಂಘಟಕ ಜಮಾಲ್ ಅಜ್ಜಿನಡ್ಕ, ಬಾತಿಷ್ ಸುಲೈಮಾನ್, ಬಶೀರ್ ಮುಳ್ಳುಗುಡ್ಡೆ ಉಪಸ್ಥಿತರಿದ್ದರು.

ಸಂಘಟಕ ಅಹ್ಮದ್ ಅಜ್ಜಿನಡ್ಕ ಸ್ವಾಗತಿಸಿದರು. ಹನೀಫ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News