ಕ್ಯಾಂಪಸ್ ಫ್ರಂಟ್ ವತಿಯಿಂದ ಶಿಕ್ಷಣ ದಿನಾಚರಣೆ ಅಂಗವಾಗಿ ‘ಪ್ರಬಂಧ ಸ್ಪರ್ಧೆ’
ಮಂಗಳೂರು, ನ. 4: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ವತಿಯಿಂದ ನ.11 ರಂದು ದೇಶದ ಪ್ರಥಮ ಶಿಕ್ಷಣ ಮಂತ್ರಿ ಡಾ. ಮೌಲಾನಾ ಅಬುಲ್ ಕಲಾಂ ಅಝಾದ್ ಸ್ಮರಣಾರ್ಥ ಆಚರಿಸುವ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಪ್ರಯುಕ್ತ ‘ಭಾರತೀಯ ಶಿಕ್ಷಣ ವ್ಯವಸ್ಥೆ’ ಎಂಬ ವಿಷಯದಲ್ಲಿ "ಪ್ರಬಂಧ ಸ್ಪರ್ಧೆ" ಗೆ ಆಹ್ವಾನಿಸಲಾಗಿದೆ.
ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದು ಮತ್ತು ಸ್ಪರ್ಧಾರ್ಥಿಗಳು ಕೆಳಕಂಡ ಸೂಚನೆಗಳನ್ನು ಪಾಲಿಸತಕ್ಕದ್ದು ಎಂದು ಜಿಲ್ಲಾ ಕಾರ್ಯದರ್ಶಿ ಸಾದಿಕ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಬಂಧ ಸ್ಪರ್ಧೆಯು ದ.ಕ ಜಿಲ್ಲೆಯ 8ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಪ್ರಬಂಧವು ಕನ್ನಡ ಭಾಷೆಯಲ್ಲಿರ ಬೇಕು ಹಾಗೂ 250 ಪದಗಳನ್ನು ಮೀರಬಾರದು. ಪ್ರಬಂಧದಲ್ಲಿ ಸಂಸ್ಥೆಯ ಮುಖ್ಯಸ್ಥರ ಸಹಿ ಮತ್ತು ಮುದ್ರೆ ಹೊಂದಿರಬೇಕು. ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಲಗತ್ತಿಸಬೇಕು. ನ.8ರ ಸಂಜೆ 5 ಗಂಟೆಯೊಳಗೆ ಈ ಮೇಲ್ ಅಥವಾ ಪೋಸ್ಟ್ ಮಾಡಬೇಕು. ಉತ್ತಮ ಪ್ರಬಂಧಕ್ಕೆ ಶಿಕ್ಷಣ ದಿನಾಚರಣೆಯಂದು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು.
campusfrontdk@gmail.com ಅಥವಾ ಕ್ಯಾಂಪಸ್ ಹೌಸ್, ಡ. ಅನ್ಸಾರಿ ರಸ್ತೆ, ಯತೀಮ್ ಖಾನ ಹಾಲ್ ಎದುರು, ಬಂದರು ಮಂಗಳೂರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9148046702