×
Ad

ಸ್ವಜನ ಪಕ್ಷಪಾತ ಆರೋಪ ಆಧಾರರಹಿತ: ಕೇರಳ ಸಚಿವ

Update: 2018-11-04 21:41 IST

ತಿರುವನಂತಪುರಂ, ನ.4: ತನ್ನ ವಿರುದ್ಧದ ಸ್ವಜನ ಪಕ್ಷಪಾತ ಆರೋಪ ಆಧಾರರಹಿತ ಎಂದಿರುವ ಕೇರಳದ ಸ್ಥಳೀಯಾಡಳಿತ ಸಚಿವ ಕೆ.ಟಿ.ಜಲೀಲ್, ತಾನು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದಿದ್ದಾರೆ.

ನಿಯಮಗಳನ್ನು ಗಾಳಿಗೆ ತೂರಿ ಜಲೀಲರ ಸೋದರ ಸಂಬಂಧಿ ಕೆ.ಟಿ. ಅದೀಬ್‌ರನ್ನು ಕೇರಳ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಹಣಕಾಸು ನಿಗಮದ ಪ್ರಧಾನ ವ್ಯವಸ್ಥಾಪಕರನ್ನಾಗಿ ನೇಮಿಸಲಾಗಿದೆ ಎಂದು ನವೆಂಬರ್ 2ರಂದು ಮುಸ್ಲಿಂ ಯುವ ಲೀಗ್ ಆರೋಪಿಸಿತ್ತು. ತನಿಖೆಯ ಬಗ್ಗೆ ಭಯವಿಲ್ಲ. ನಾನು ಏನನ್ನೂ ಮುಚ್ಚಿಟ್ಟಿಲ್ಲ. ಸ್ವಜನ ಪಕ್ಷಪಾತ ನಡೆದಿದ್ದರೆ ಅವರು ನ್ಯಾಯಾಲಯಕ್ಕೆ ಹೋಗಲಿ. ಅಗತ್ಯದ ಅರ್ಹತೆಗಳಿದ್ದರೆ ಯಾರನ್ನು ಬೇಕಾದರೂ ನೇಮಕ ಮಾಡಿಕೊಳ್ಳಬಹುದು ಎಂದು ಸಚಿವ ಜಲೀಲ್ ಪ್ರತಿಕ್ರಿಯಿಸಿದ್ದಾರೆ.

ನೂತನ ವ್ಯವಸ್ಥಾಪಕರು ಹಳೆ ಸಾಲದ ಬಾಕಿ ವಸೂಲಾತಿಗೆ ಮುಂದಾದಾಗ ಮುಸ್ಲಿಂ ಲೀಗ್ ನಾಯಕರಿಗೆ ಬಿಸಿ ತಾಗಿದೆ. ಹಲವು ಮುಸ್ಲಿಂ ಲೀಗ್ ನಾಯಕರು ಬೃಹತ್ ಮೊತ್ತದ ಸಾಲ ಪಡೆದಿದ್ದು ಮರು ಪಾವತಿಸಿಲ್ಲ ಎಂದು ಸಚಿವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News