×
Ad

ನೀರಾವರಿ ಹಗರಣ: ಯಾವುದೇ ಸಂಧರ್ಭ ಅಜಿತ್ ಪವಾರ್ ಬಂಧನ ಸಾಧ್ಯತೆ

Update: 2018-11-04 22:02 IST

ಮುಂಬೈ,ನ.4: ಹಿರಿಯ ಎನ್‌ಸಿಪಿ ನಾಯಕ ಹಾಗೂ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ನೀರಾವರಿ ಹಗರಣದ ಆರೋಪದಲ್ಲಿ ಯಾವುದೇ ಸಮಯ ಬಂಧನಕ್ಕೊಳಗಾಗಬಹುದು ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರಾವಸಾಹೇಬ್ ದಾನವೆ ಹೇಳಿದ್ದಾರೆ.

ಆದರೆ ಹಗರಣದಲ್ಲಿ ಪವಾರ್ ಪಾತ್ರವಿಲ್ಲ ಎಂದು ಹೇಳಿರುವ ಎನ್‌ಸಿಪಿಯು,ಚುನಾವಣೆಗೆ ಮುನ್ನ ರಾಜಕೀಯ ವಾತಾವರಣವನ್ನು ಕಲುಷಿತಗೊಳಿಸಲು ಬಿಜೆಪಿಯು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

1999-2014ರ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಸರಕಾರವಿದ್ದಾಗ ಬೇರ ಬೇರೆ ಸಮಯಗಳಲ್ಲಿ ನೀರಾವರಿ ಖಾತೆಯನ್ನು ನಿರ್ವಹಿಸಿದ್ದ ಎನ್‌ಸಿಪಿ ಸಚಿವರಲ್ಲಿ ಪವಾರ್ ಒಬ್ಬರಾಗಿದ್ದರು.

ಅಂದಾಜು 72,000 ಕೋ.ರೂ.ಗಳ ಈ ಹಗರಣವು ಕಾಂಗ್ರೆಸ್-ಎನ್‌ಸಿಪಿ ಆಡಳಿತದಲ್ಲಿ ರಾಜ್ಯದಲ್ಲಿ ವಿವಿಧ ನೀರಾವರಿ ಯೋಜನೆಗಳಿಗೆ ಸಮ್ಮತಿ ಮತ್ತು ಕಾಮಗಾರಿಗಳಲ್ಲಿ ನಡೆದಿವೆ ಎನ್ನಲಾಗಿರುವ ಭ್ರಷ್ಟಾಚಾರ ಮತ್ತು ಅಕ್ರಮಗಳಿಗೆ ಸಂಬಂಧಿಸಿದೆ. ಎಸಿಬಿ ಹಗರಣದ ತನಿಖೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News