×
Ad

ನೆರವು ತಡೆಹಿಡಿದ ಅಮೆರಿಕ, ಜಪಾನ್: ರನಿಲ್

Update: 2018-11-04 22:17 IST

ಕೊಲಂಬೊ, ನ. 4: ನನ್ನ ದಿಢೀರ್ ಉಚ್ಚಾಟನೆಯು ಶ್ರೀಲಂಕಾದಲ್ಲಿ ಪ್ರಜಾಸತ್ತೆಯ ಭವಿಷ್ಯದ ಬಗ್ಗೆ ಸಂದೇಹಗಳನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಶ್ರೀಲಂಕಾಕ್ಕೆ ನೀಡಬೇಕಾಗಿರುವ 100 ಕೋಟಿ ಡಾಲರ್‌ಗೂ ಅಧಿಕ ಮೊತ್ತದ ಅಭಿವೃದ್ಧಿ ನೆರವನ್ನು ಅಮೆರಿಕ ಮತ್ತು ಜಪಾನ್ ತಡೆಹಿಡಿದಿವೆ ಎಂದು ದ್ವೀಪರಾಷ್ಟ್ರದ ಉಚ್ಚಾಟಿತ ಪ್ರಧಾನಿ ರನಿಲ್ ವಿಕ್ರಮೆಸಿಂಘೆ ಹೇಳಿದ್ದಾರೆ.

ಅದೇ ವೇಳೆ, ಶ್ರೀಲಂಕಾ ಸರಕಾರ ರಾಷ್ಟ್ರೀಯ ಏಕತೆಯ ಬದ್ಧತೆಯನ್ನು ಪೂರೈಸದಿದ್ದರೆ ದೇಶದ ರಫ್ತುಗಳಿಗೆ ನೀಡಲಾಗಿರುವ ತೆರಿಗೆ ವಿನಾಯಿತಿಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕಾಗಬಹುದು ಎಂದು ಐರೋಪ್ಯ ಒಕ್ಕೂಟ ಎಚ್ಚರಿಕೆ ನೀಡಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ಈ ಕ್ರಮಗಳು ಶ್ರೀಲಂಕಾದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ವಿಕ್ರಮೆಸಿಂಘೆ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News