ನ. 5ರಂದು ಆಳ್ವಾಸ್‍ನಲ್ಲಿ ಉಚಿತ ಆಯುರ್ವೇದ ಶಿಬಿರ, ಸಸಿ ವಿತರಣೆ
Update: 2018-11-04 22:37 IST
ಮೂಡುಬಿದಿರೆ, ನ. 4: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ವಿದ್ಯಾಗಿರಿ ಇದರ ಆಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ನ. 5ರಂದು ವಿದ್ಯಾಗಿರಿಯಲ್ಲಿನ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಉಚಿತ ಆಯುರ್ವೇದ ಶಿಬಿರ, ಆಯುರ್ವೇದ ಗಿಡ ಮೂಲಿಕೆಗಳ ಸಸಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10ರಿಂದ 12ರವರೆಗೆ ವಿದ್ಯಾಗಿರಿಯ ಪಿ.ಜಿ. ಸೆಮಿನಾರ್ ಹಾಲ್‍ನಲ್ಲಿ ಹಿತ್ತಲಗಿಡ ಮದ್ದು ಕುರಿತಂತೆ ಡಾ.ಶ್ರೀಧರ ಬಾಯರಿ ಅವರು ಮಾಹಿತಿ ನೀಡಲಿದ್ದಾರೆ. ತಜ್ಞ ವೈದ್ಯರಿಂದ ಆರೋಗ್ಯ ಸಮಾಲೋಚನೆ, ತಪಾಸಣೆ, ರಕ್ತದೊತ್ತಡ ಪರೀಕ್ಷೆ ಇತ್ಯಾದಿ ಸೌಲಭ್ಯಗಳಿದ್ದು ಶಿಬಿರದ ಪ್ರಯೋಜನ ಪಡೆಯ ಬೇಕೆಂದು ಪ್ರಕಟಣೆ ತಿಳಿಸಿದೆ.