×
Ad

ಚೆನ್ನೈತ್ತೋಡಿ ಸರಕಾರಿ ಶಾಲೆ: ಅನ್ನಪೂರ್ಣ ಭೋಜನ ಶಾಲೆ ನಿರ್ಮಾಣಕ್ಕೆ ಶಿಲಾನ್ಯಾಸ

Update: 2018-11-04 22:46 IST

ಬಂಟ್ವಾಳ, ನ. 4: ಶತಮಾನೋತ್ಸವ ಸಂಭ್ರಮದಲ್ಲಿರುವ ಚೆನ್ನೈತ್ತೋಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಯೋಜನೆಯ ಅಂಗವಾಗಿ ನಿರ್ಮಾಣಗೊಳ್ಳಲಿರುವ ಅನ್ನಪೂರ್ಣ ಭೋಜನ ಶಾಲೆಗೆ ರವಿವಾರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. 

ಗಂಗಾಧರ ಕಕೃಣ್ಣಾಯ ಅವರ ಪೌರೋಹಿತ್ಯದಲ್ಲಿ ನಿವೃತ್ತ ಶಿಕ್ಷಕ ಸಂದರ ಶೆಟ್ಟಿ ಬಜೆ ಶಿಲಾನ್ಯಾಸ ನೆರವೇರಿಸಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಹಂಝ ಎ.ಬಸ್ತಿಕೋಡಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಡಿ.22ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಗುರುವಂದನೆ, ಸಾಂಸ್ಕøತಿಕ ವೈಭವ ಮತ್ತಿತರ ಕಾರ್ಯಕ್ರಮಗಳೊಂದಿಗೆ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ಚರ್ಚಿಸಲಾಯಿತು. ಇದೇ ಸಂದರ್ಭ ಶತಮಾನೋತ್ಸವದ ಯಶಸ್ವಿಗಾಗಿ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

ಶಿಕ್ಷಣ ತರಬೇತುದಾರ ಗೋಪಾಲ ಅಂಚನ್ "ಸಮಿತಿ ರಚನೆ ಮತ್ತು ಜವಾಬ್ಧಾರಿಗಳು" ವಿಷಯದಲ್ಲಿ ಮಾಹಿತಿ ನೀಡಿದರು. ತಾಲೂಕು ಪಂಚಾಯತ್ ಸದಸ್ಯೆ ರತ್ನಾವತಿ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷ ಯತೀಶ್ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಶತಮಾನೋತ್ಸವ ಸಮಿತಿ ಸಂಚಾಲಕ ನಾರಾಯಣ ಶೆಟ್ಟಿ ಪರಾರಿ, ಪ್ರಧಾನ ಕಾರ್ಯದರ್ಶಿ ಡೇನಿಸ್ ಫರ್ನಾಂಡೀಸ್, ಕೋಶಾಧಿಕಾರಿ ಅನಂತ ಪೈ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಪ್ರಮೀಳಾ, ಪ್ರಮುಖರಾದ ಶ್ರೀಧರ ಪೈ, ನವೀನ್‍ಚಂದ್ರ ಶೆಟ್ಟಿ, ಮೋಹನದಾಸ ಗಟ್ಟಿ, ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಚಂದ್ರಶೇಖರ ಶೆಟ್ಟಿ, ಕಮಲ್ ಶೆಟ್ಟಿ, ನಾಗರಾಜ ಶೆಟ್ಟಿ, ಪ್ರಕಾಶ್ ಗಟ್ಟಿ, ಗುಣವತಿ, ಶೌಕತ್ ಅಲಿ, ಮಾಧವ, ಸತೀಶ್ ಶೆಟ್ಟಿ, ಸತೀಶ್ ಅಂತರಗುತ್ತು, ಯಶೋಧರ ಸಪಲ್ಯ, ಮುಖ್ಯ ಶಿಕ್ಷಕಿ ಜಾನೆಟ್ ಮೊದಲಾದವರಿದ್ದರು.

ಶಿಕ್ಷಕ ಸಂತೋಷ್ ಕುಮಾರ್ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News