×
Ad

ಅಕ್ರಮ ದನ ಸಾಗಾಟ ಆರೋಪ: ವಾಹನ ಸಹಿತ ಓರ್ವ ಸೆರೆ

Update: 2018-11-04 22:53 IST

ಬಂಟ್ವಾಳ, ನ. 4: ವಾಹನವೊಂದರಲ್ಲಿ ದನಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ವಾಹನ ಸಹಿತ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ವಿಟ್ಲದ ಕೋಡಪದವು ಎಂಬಲ್ಲಿ ರವಿವಾರ ನಡೆದಿದೆ.

ಕಲ್ಲಡ್ಕ ಸಮೀಪದ ಗೋಳ್ತಮಜಲು ನಿವಾಸಿ ಖಲೀಲ್ ಬಂಧಿತ ಆರೋಪಿ. ಎರಡು ದನ, ಒಂದು ಕರು ಹಾಗೂ ಪಿಕಪ್ ವಾಹನವನ್ನು ವಿಟ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅನಂತಾಡಿ ಕಡೆಯಿಂದ ಅಕ್ರಮವಾಗಿ ದನಗಳನ್ನು ಕೋಡಪದವು-ಸಾಲೆತ್ತೂರು ಮೂಲಕ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ವಿಟ್ಲ ಎಸ್ಸೈ ಯಲ್ಲಪ್ಪ ನೇತೃತ್ವದ ತಂಡ ಬೊಣ್ಯಕುಕ್ಕು ಎಂಬಲ್ಲಿ ದಾಳಿ ನಡೆಸಿ, ವಶಪಡಿಸಿಕೊಂಡಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News