ಕಲ್ಲಡ್ಕ ಮದರಸ ಶಿಕ್ಷಕ ರಕ್ಷಕ ಸಂಘದ ಸಭೆ

Update: 2018-11-04 17:26 GMT

ವಿಟ್ಲ, ನ. 4: ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ಇದರ ಅಧೀನಕ್ಕೊಳಪಟ್ಟ ಮುನೀರುಲ್ ಇಸ್ಲಾಂ ಮದರಸದ ಶಿಕ್ಷಕ ರಕ್ಷಕ ಸಂಘದ ಸಭೆಯು ರವಿವಾರ ಸಂಜೆ ಇಲ್ಲಿನ ಮದರಸ ಹಾಲ್ ನಲ್ಲಿ ನಡೆಯಿತು.

ಕಲ್ಲಡ್ಕ ಎಂ.ಜೆ.ಎಂ.ಅದ್ಯಕ್ಷ ಅಬೂಬಕ್ಕರ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಮುದರ್ರಿಸ್ ಹಾಜಿ ಇಸ್ಮಾಯಿಲ್ ಫೈಝಿ ಉದ್ಘಾಟಿಸಿದರು. ಮುಖ್ಯ ಭಾಷಣಗೈದ ಚೇಳಾರಿ ಎಸ್ಕೆಐಎಂ ಬೋರ್ಡ್ ಮುದರ್ರಿಬ್ ಬಶೀರ್ ಮುಸ್ಲಿಯಾರ್ ಮಲಪ್ಪುರಂ ಮಾತನಾಡಿ, ಮಕ್ಕಳು ಮಾತಾಪಿತರಿಗೆ ಸೃಷ್ಟಿಕರ್ತನು ನೀಡಿದ ಅಮಾನತ್ತಾಗಿದ್ದು ಅವರ ಸಂರಕ್ಷಣೆ ಹಾಗೂ ಸತ್ಪ್ರಜೆಯನ್ನಾಗಿ ರೂಪಿಸುವ ಮಹತ್ತರವಾದ ಜವಾಬ್ದಾರಿ ರಕ್ಷಕರ ಮೇಲಿದೆ ಎಂದರು.

ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಾಜಿ, ಜೊತೆ ಕಾರ್ಯದರ್ಶಿ ಸ್ವಾದಿಕ್, ಮದ್ರಸ ಶಿಕ್ಷಕರುಗಳಾದ ಅಬ್ದುಲ್ಲಾ ಮುಸ್ಲಿಯಾರ್, ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ದುಲ್ ರಝಾಕ್ ಮುಸ್ಲಿಯಾರ್, ಅಬ್ದುಲ್ ನಿಸಾರ್ ಮುಸ್ಲಿಯಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮದರಸ ಮುಖ್ಯ ಶಿಕ್ಷಕ ಬಿ.ಟಿ.ಮುಹಮ್ಮದ್ ಇಕ್ಬಾಲ್ ದಾರಿಮಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News