5462 ಹಾಸಿಗೆಗಳ ಪಟ್ನಾ ಆಸ್ಪತ್ರೆ ಜಗತ್ತಿನಲ್ಲೇ ದೊಡ್ಡದು: ಸರಕಾರ

Update: 2018-11-04 17:28 GMT

ಪಟ್ನಾ,ನ.4: ಬಿಹಾರದ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಪಿಎಂಸಿಎಚ್)ಯನ್ನು 5,462 ಹಾಸಿಗೆಗಳೊಂದಿಗೆ ಪುನರ್ ಅಭಿವೃದ್ಧಿಗೊಳಿಸಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಆಸ್ಪತ್ರೆಯನ್ನಾಗಿ ಮಾಡುವ ಯೋಜನೆಗೆ ಬಿಹಾರ ಸಂಪುಟ ಶನಿವಾರ ಅಂಗೀಕಾರ ನೀಡಿದೆ.

ಈ ಯೋಜನೆಗೆ 5,540.07 ಕೋಟಿ ರೂ. ವೆಚ್ಚವಾಗಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬಿಹಾರ ವೈದ್ಯಕೀಯ ಸೇವೆಗಳು ಮತ್ತು ಇನ್‌ಫ್ರಾಸ್ಟ್ರಕ್ಚರ್ ಕಾರ್ಪೊರೇಶನ್ ಲಿ. (ಬಿಎಂಎಸ್‌ಐಸಿಎಲ್) ಈ ಪುನರ್ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಿದೆ ಎಂದು ಸಂಪುಟ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News