ಬ್ಯಾರೀಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿ: ಮೆನ್ಸ್ ಓಪನ್ ಡಬಲ್ಸ್‌ನಲ್ಲಿ ರಿಝ್ವಾನ್-ಸಫ್ವಾನ್ ವಿನ್ನರ್
ಮಂಗಳೂರು, ನ.4: ಬ್ಯಾರೀಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೆನ್ಸ್ ಓಪನ್ ಡಬಲ್ಸ್‌ನಲ್ಲಿ ರಿಝ್ವಾನ್ - ಸಫ್ವಾನ್ ಪ್ರಥಮ ಸ್ಥಾನವನ್ನು ಪಡೆದರೆ, ರಯೀಝ್ - ರಹ್ಮತುಲ್ಲಾ ದ್ವಿತೀಯ ಸ್ಥಾನ ಪಡೆದುಕೊಂಡರು. ಇಸ್ಮಾಯೀಲ್ - ನೂರ್ ತೃತೀಯ ಸ್ಥಾನ ಪಡೆದರೆ, ಶಾಬಾಝ್ - ಬಾಸಿಲ್ ಚತುರ್ಥ ಸ್ಥಾನವನ್ನು ಪಡೆಯುವ ಮೂಲಕ ಸಂತೃಪ್ತರಾದರು.
ಬ್ಯಾರೀಸ್ ಸ್ಪೋರ್ಟ್ಸ್ ಪ್ರೊಮೊಟರ್ಸ್‌ನಿಂದ ನಗರದ ಲಾಲ್‌ಬಾಗ್‌ನ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಲಾಗಿದ್ದ ಬ್ಯಾರೀಸ್ ಕಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ರಾತ್ರಿ ವೇಳೆ ತೆರೆ ಕಂಡಿತು.
75 ಪ್ಲಸ್ ಕಂಬೈನ್ಡ್ ಏಜ್ ವಿಭಾಗದಲ್ಲಿ ಶಮೀರ್-ಖಲೀಲ್ ಪ್ರಥಮ ಸ್ಥಾನ, ರಿಝ್ವಾನ್-ಎ.ಕೆ.ನಿಯಾಝ್ ದ್ವಿತೀಯ ಸ್ಥಾನವನ್ನು ಅಲಂಕರಿಸಿದರೆ, ಅನ್ಸಾಫ್-ತೌಸೀಫ್ ತೃತೀಯ, ಹಮೀದ್-ಸಿದ್ದೀಕ್ ಚತುರ್ಥ ಸ್ಥಾನ ಪಡೆದುಕೊಂಡರು.
85 ಪ್ಲಸ್ ಕಂಬೈನ್ಡ್ ಏಜ್ ವಿಭಾಗದಲ್ಲಿ ರಿಯಾಝ್ ಎ.ಎಚ್.-ಶಮೀರ್ ಪ್ರಥಮ, ಹನೀಫ್-ಹಮೀದ್ ಪುತ್ತೂರು ದ್ವಿತೀಯ ಸ್ಥಾನ ಪಡೆದುಕೊಂಡರೆ, ರಫೀಕ್-ಇಶಾಕ್ ತೃತೀಯ, ಖಲುಲ್-ಅಬ್ದುಲ್ಲಾ ಚತುರ್ಥ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
95 ಪ್ಲಸ್ ಕಂಬೈನ್ಡ್ ಏಜ್ ವಿಭಾಗದಲ್ಲಿ ಸಿದ್ದೀಕ್ ಯು.ಕೆ.-ಕೆ.ಎಂ.ಅಬ್ದುಲ್ಲಾ ಪ್ರಥಮ, ರಿಯಾಝ್ ಎ.ಎಚ್.- ಎ.ಕೆ.ನಿಯಾಝ್ ದ್ವೀತಿಯ ಸ್ಥಾನ ಪಡೆದು ಕೊಂಡರು. ರಫೀಕ್ ಪೊಕ-ಅನ್ವರ್ ತೃತೀಯ, ನಝೀರ್-ಶಾನವಾಝ್ ಚತುರ್ಥ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾದರು.
ಸಮಾರೋಪ ಕಾರ್ಯಕ್ರಮದಲ್ಲಿ ವಿಜಯಶಾಲಿಗಳಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಂಬರ್ ಗ್ರೂಪ್ ಶಾರ್ಜಾದ ಎಂಡಿ ಕೆ.ಎಲ್.ಪಿ. ಯೂಸುಫ್, ಸುಲ್ತಾನ್ ಗೋಲ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ಟಿ.ಎಂ.ಅಬ್ದುಲ್ ರವೂಫ್, ಮಂಗಳೂರು ಆದಾಯ ತೆರಿಗೆ ಅಧಿಕಾರಿ ಪರಿಮೆಲಝಗನ್ ಪಿ.ಜೆ., ಯುಎಇ ರಾಷ್ಟ್ರಾಧ್ಯಕ್ಷರ ಖಾಸಗಿ ಇಲಾಖೆಯ ಮಾಜಿ ಸಿಬ್ಬಂದಿ ಇಸ್ಮಾಯೀಲ್ ಪಿ.ಕೆ., ಎ.ಕೆ. ಆ್ಯಪಲ್ ಗ್ರೂಪ್‌ನ ನಿರ್ದೇಶಕ ಎ.ಕೆ.ನೌಶಾದ್, ಬ್ಯಾರೀಸ್ ಸ್ಪೋರ್ಟ್ಸ್ ಪ್ರೊಮೊಟರ್ಸ್‌ನ ಅಧ್ಯಕ್ಷ ನೂರ್ ಮುಹಮ್ಮದ್, ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎ.ಎಸ್.ವೆಂಕಟೇಶ್ ಪ್ರಶಸ್ತಿಗಳನ್ನು ವಿತರಿಸಿದರು.