ಉಡುಪಿ ನಗರಾದ್ಯಂತ ಟ್ರಾಫಿಕ್ ಜಾಮ್ ಕಿರಿಕಿರಿ !
ಉಡುಪಿ, ನ.5: ದೀಪಾವಳಿ ಹಬ್ಬದ ಮುನ್ನ ದಿನವಾದ ಇಂದು ಸಂಜೆ ವೇಳೆ ಉಡುಪಿ ನಗರದ ಪ್ರಮುಖ ಎಲ್ಲ ರಸ್ತೆಗಳಲ್ಲಿ ಉಂಟಾದ ಟ್ರಾಫಿಕ್ ಜಾಮ್‌ನಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು.
ನಗರದ ಕೆಎಂ ರಸ್ತೆ, ಉಡುಪಿ- ಮಣಿಪಾಲ ರಸ್ತೆ, ಸಂಸ್ಕೃತ ಕಾಲೇಜು ರಸ್ತೆ, ಜಾಮೀಯ ಮಸೀದಿ ರಸ್ತೆ, ಆಭರಣ ರಸ್ತೆ, ಗೀತಾಂಜಲಿ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದು ಕಂಡುಬಂತು.
ಹಬ್ಬದ ಖರೀದಿಯ ಹಿನ್ನೆಲೆ ಹಾಗೂ ಕಟ್ಟಡಗಳಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿದ ಪರಿಣಾಮ ಟ್ರಾಫಿಕ್ ಜಾಮ್ ಸಂಭವಿಸಿದ್ದು, ಒಂದೊಂದು ವಾಹನಗಳು ನಗರದಿಂದ ಹೊರ ಹೋಗಲು ಸುಮಾರು ಒಂದು ಗಂಟೆಗೂ ಅಧಿಕ ಸಮಯ ಪಡೆದುಕೊಳ್ಳು ವಂತಾಯಿತು.
ಪ್ರಮುಖ ರಸ್ತೆಗಳಲ್ಲಿ ಬಿಟ್ಟರೆ ಉಳಿದ ಯಾವುದೇ ರಸ್ತೆಗಳಲ್ಲಿ ವಾಹನಗಳು ಸುಗಮವಾಗಿ ಸಂಚರಿಸುವಂತೆ ಮಾಡಲು ಯಾವುದೇ ಪೊಲೀಸ್ ಸಿಬ್ಬಂದಿಗಳು ಇರಲಿಲ್ಲ. ಇದರಿಂದ ಕೆಲವು ಕಡೆ ವಾಹನ ಚಾಲಕರೇ ಟ್ರಾಫಿಕ್ ಜಾಮ್ ತಿಳಿಗೊಳಿಸಲು ಮುಂದಾದರು. ಉಡುಪಿ- ಮಣಿಪಾಲ ರಸ್ತೆಯ ಒಂದು ಬದಿ ದುರಸ್ತಿಯಾಗುತ್ತಿರುವುದರಿಂದ ಸಾರ್ವಜನಿಕರು ರಾತ್ರಿ ಪೂರ್ತಿ ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಯಿತು.