×
Ad

ಜೂಜಾಟ: ನಾಲ್ವರ ವಶಕ್ಕೆ

Update: 2018-11-05 19:33 IST

ಬಂಟ್ವಾಳ, ನ. 5: ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇರೆಗೆ ನಾಲ್ವರನ್ನು ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.

ಮುಡ್ನೂರು ಗ್ರಾಮದ ಹೇಮಾಜೆ ನಿವಾಸಿಗಳಾದ ಚಂದ್ರಶೇಖರ್, ಈಶ್ವರ್, ಅಕ್ಷಿತ್, ಯೋಗೀಶ್ ಬಂಧಿತ ಆರೋಪಿಗಳು. ರವಿವಾರ ರಾತ್ರಿ 1ಗಂಟೆಗೆ ಸುಮಾರಿಗೆ ಇಲ್ಲಿನ ಹೇಮಾಜೆಯ ಸಾರ್ವಜನಿಕ ಸ್ಥಳದಲ್ಲಿ ತಂಡವೊಂದು ಹಣವನ್ನು ಪಣವಾಗಿಟ್ಟು ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ವಿಟ್ಲ ಎಸ್ಸೈ ಯಲ್ಲಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ.

ಆರೋಪಿಗಳಿಂದ 4,200 ರೂ. ಹಾಗೂ ಜೂಜಾಟಕ್ಕೆ ಉಪಯೋಗಿಸುತ್ತಿದ್ದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News