ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘ ಮಂಗಳೂರು: ನ. 11ರಂದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
ಬಂಟ್ವಾಳ, ನ. 5: ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘ ಮಂಗಳೂರು ಇದರ ವತಿಯಿಂದ ಬಂಟ್ವಾಳ ತಾಲೂಕು ಘಟಕದ ಸಹಯೋಗದಲ್ಲಿ ಆಚರಿಸಲ್ಪಡುವ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಪ್ರಯುಕ್ತ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯು ನ. 11ರಂದು ಬೆಳಿಗ್ಗೆ 9:30ಕ್ಕೆ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
ಸ್ಪರ್ಧೆಗಳ ವಿವರ
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಪಷ್ಟ ಓದು ಸ್ಪರ್ಧೆ (ಕನ್ನಡ ಭಾಷೆ), ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಸ್ಪೆಲ್ಲಿಂಗ್ ಹೇಳುವ ಸ್ಪರ್ಧೆ (ಆಂಗ್ಲ ಭಾಷಾ ಪದಗಳು), ಪದವಿ ಪೂರ್ವ (ಪ್ರಥಮ/ದ್ವಿತೀಯ ಪಿಯುಸಿ) ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧಾರ್ಥಿಗಳು ತಮ್ಮ ಶಾಲಾ/ ಕಾಲೇಜಿನ ಮುಖ್ಯಸ್ಥರಿಂದ ಧೃಡೀಕರಣ ಪತ್ರ ತರುವುದು. ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಹೆಸರನ್ನು 9535522717, 9481376005 ನಂಬರ್‌ಗೆ ಎಸ್‌ಎಂಎಸ್ ಅಥವಾ ವ್ಯಾಟ್ಸಾಫ್ ಮೂಲಕ ದಿನಾಂಕ ನ. 9ರ ಮೊದಲು ಕಳುಹಿಸಿಕೊಡುವಂತೆ ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘ ಮಂಗಳೂರು ಇದರ ಪ್ರಕಟನೆ ತಿಳಿಸಿದೆ.