×
Ad

ನ.9-10:ಸಂತ ಅಲೋಶಿಯಸ್ ನಲ್ಲಿ ಪ್ರತಿಭಾನ್ವೇಷಣೆ ‘ಪ್ರೀಯುನಿಕ್ 2018’

Update: 2018-11-05 20:27 IST

ಮಂಗಳೂರು, ನ. 5: ಶತಮಾನಗಳ ಚಾರಿತ್ರಿಕ ಪರಂಪರೆಯ ಮಂಗಳೂರಿನ ಸಂತ ಅಲೋಶಿಯಸ್ ಪ.ಪೂ.ಕಾಲೇಜು ನಡೆಸಿಕೊಂಡು ಬರುತ್ತಿರುವ ರಾಜ್ಯ ಮಟ್ಟದ ಸಾಹಿತ್ಯ ಸಾಂಸ್ಕೃತಿಕ ವೈಭವ ಪ್ರತಿಭಾನ್ವೇಷಣೆ ಪ್ರೀಯುನಿಕ್ 2018 ನ. 9 ಮತ್ತು 10 ರಂದು ಪದವಿ ಪೂರ್ವ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ವಂ.ಮೆಲ್ವಿನ್ ಮೆಂಡೋನ್ಸಾ ಎಸ್.ಜೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಒಂದಾಗಿ ನಿಲ್ಲೋಣ ಎನ್ನುವ ಪರಿಕಲ್ಪನೆಯೊಂದಿಗೆ ನಡೆಯಲಿರುವ ಈ ವರ್ಷದ ಪ್ರೀಯುನಿಕ್ ಪ್ರತಿಭಾನ್ವೇಷಣೆಯಲ್ಲಿ ಶೈಕ್ಷಣಿಕ ಪ್ರಗತಿಯೊಂದಿಗೆ ವಿದ್ಯಾರ್ಥಿಗಳ ಸರ್ವೋತೋಮುಖ ಪ್ರತಿಭಾ ವಿಕಾಸಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನದ ವಿವಿಧ ವಿಭಾಗಗಳ 38 ಸ್ಪರ್ಧೆಗಳು ಕಾಲೇಜು ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದೆ.

ಕಾಲೇಜಿನಲ್ಲಿ 4,100 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ರಾಜ್ಯ ಮಟ್ಟದ ಈ ಸ್ಪರ್ಧೆಗೆ ವಿವಿಧ ಕಾಲೇಜಿನಿಂದ ತಲಾ 60 ವಿದ್ಯಾರ್ಥಿಗಳ ತಂಡಕ್ಕೆ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶವಿದೆ. ಈಗಾಗಲೆ 30 ಶಿಕ್ಷಣ ಸಂಸ್ಥೆಗಳ ತಂಡ ನೋಂದಣಿ ಮಾಡಿದ್ದು 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆ ಇದೆ. ನ.9ರಂದು ಬೆಳಗ್ಗೆ 8.30 ಗಂಟೆಗೆ ಎಐಎಂಐಟಿಯ ನಿರ್ದೇಶಕರಾದ ವಂ.ಡೆನ್ಝಿಲ್ ಲೋಬೊ ಎಸ್.ಜೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ತುಳು ಚಿತ್ರ ನಟ ದೇವದಾಸ್ ಕಾಫಿಕಾಡ್ ಮತ್ತು ರಾಷ್ಟ್ರಮಟ್ಟದ ಅಥ್ಲೆಟ್ ಕುಮಾರಿ ವರ್ಷ ರೋಹಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನ.10ರಂದು ಸಂಜೆ 3.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಂ.ಮೆಲ್ವಿನ್ ಮೆಂಡೋನ್ಸಾ ಎಸ್.ಜೆ ತಿಳಿಸಿದ್ದಾರೆ.ಸುದ್ದಿ ಗೋಷ್ಠಿಯಲ್ಲಿ ಡೀನ್ ಡಾ.ಗಣೇಶ್ ಅಮೀನ್ ಸಂಕ ಮಾರ್ ಸಂಯೋಜಕರಾದ ಪ್ರಮೀಳ ಪತ್ರಾವೊ,ಜೋಸೆಫ್ ಪ್ರೇಮ್ ಸಲ್ದಾನಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News