ಪುತ್ತೂರು: ಹೃದಯಾಘಾತದಿಂದ ಯುವಕ ಮೃತ್ಯು
Update: 2018-11-05 20:30 IST
ಪುತ್ತೂರು, ನ. 5: ಇಲ್ಲಿನ ಜ್ಯುವೆಲ್ ವಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಉಡುಪಿ ಮೂಲದ ಪ್ರಶಾಂತ್ (38) ಮೃತಪಟ್ಟವರು.
ಅವರು ಪುತ್ತೂರಿನ ಜ್ಯುವೆಲ್ಲರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದು, ರೂಂನಲ್ಲಿ ವಾಸ್ತವ್ಯ ಹೂಂದಿದ್ದರು. ಸೋಮವಾರ ಬೆಳಗ್ಗೆ ತನ್ನ ಕೆಲಸಕ್ಕೆ ಕುಳಿತುಕೊಳ್ಳುತ್ತಿದ್ದ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ವೇಳೆ ಅವರು ಮೃತಪಟ್ಟಿದ್ದರು.
ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.