ನ.9-10;ಯಕ್ಷಾಂಗಣದಿಂದ ತಾಳ ಮದ್ದಳೆ ಸಪ್ತಾಹ
ಮಂಗಳೂರು, ನ. 5: ಯಕ್ಷಾಂಗಣ ಮಂಗಳೂರು ಇದರ ವತಿಯಿಂದ ಯಕ್ಷಗಾನ ಚಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ಕನ್ನಡ ರಾಜೋತ್ಸವ ಕಲಾ ಸಂಭ್ರಮವಾಗಿ ಕನ್ನಡ ನುಡಿಹಬ್ಬ ಯಕ್ಷಗಾನ ತಾಳಮದ್ದಳೆ ಸಪ್ತಾಹ 2018 ನ. 9ರಿಂದ 15ರವರೆಗೆ ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಜರಗಲಿದೆ ಎಂದು ಸಂಸ್ಥೆಯ ಕಾರ್ಯಧ್ಯಕ್ಷ ಭಾಸ್ಕರ ರೈ ಕುಕ್ಕವಳ್ಳಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಪ್ತಾಹದಲ್ಲಿ ಕಲಾ ಪೋಷಕ ಜಯರಾಮ ಶೇಖರಿಗೆ ಯಕ್ಷಾಂಗಣ ರಾಜೋತ್ಸವ ಪುರಸ್ಕಾರವನ್ನು ನೀಡಲಾಗುವುದು. ಬಡಗುತಿಟ್ಟಿನ ಹಿರಿಯ ಭಾಗವತ ತೋನ್ಸೆ ಜಯಂತ್ ಕುಮಾರ್‌ರವರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿ ನೀಡಲಾಗುವುದು. ಸಪ್ತಾಹದ ಏಳು ದಿನಗಳಲ್ಲಿ ಪ್ರತಿದಿನಸಂಜೆ 5ರಿಂದ ಕಲ್ಯಾಣ ಸಪ್ತಕ ಸರಣೆಯಲ್ಲಿ ಏಳು ಕಲ್ಯಾಣ ಪ್ರಸಂಗಗಳ ತಾಳಮದ್ದಳೆ ಏರ್ಪಡಿಸಲಾಗಿದೆ ಎಂದು ಭಾಸ್ಕರ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತೋನ್ಸೆ ಪುಷ್ಕಳ ಕುಮಾರ್,ಎಂ.ವಿಶ್ವನಾಥ ಶೆಟ್ಟಿ ತಿರ್ಥಹಳ್ಳಿ,ಲಕ್ಷ್ಮೀ ನಾರಾಯಣ ರೈ ಹರೇಕಳ,ಶೋಭಾ ಕೇಶವ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.