ಕಾಂಗ್ರೆಸ್ ಮುಖಂಡ ಸುರೇಶ್ ನಿಧನ
ಮಂಗಳೂರು, ನ.5: ಗೋರಿ ಬಾಯ್ಸ ಕ್ರಿಕೆಟ್ ಟೀಮ್ ಪಾಂಡೇಶ್ವರ ಹಾಗೂ ಕಾಂಗ್ರೆಸ್ ಮುಖಂಡ, ಪಾಂಡೇಶ್ವರ ನಿವಾಸಿ ಸುರೇಶ್ ಬಿ.ಎನ್. (48) ಕಾಲುಜಾರಿ ಬಿದ್ದು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ನಿಧನ ಹೊಂದಿದರು.
ಮೃತರು ತಂದೆ ಉದ್ಯಮಿ ಎ.ಬಿ.ನಾರಾಯಣ, ತಾಯಿ, ಪತ್ನಿ ಹಾಗೂ ಎರಡು ಗಂಡು ಮಕ್ಕಳು, ಓರ್ವ ಪುತ್ರಿ, ಮೂವರು ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರು 46ನೇ ವಾರ್ಡ್‌ನ ಕಾಂಗ್ರೆಸ್ ಕಂಟೋನ್ ಮೆಂಟ್ ವಾರ್ಡ್‌ನ ಅಧ್ಯಕ್ಷರಾಗಿ ಸತತ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಾಂಡೇಶ್ವರದ ಗೋರಿ ಕ್ರಿಕೆಟ್ ಟೀಮ್ ಕಟ್ಟಿ ಹಲವು ಕ್ರೀಡಾಪಟುಗಳನ್ನು ಪೋಷಿಸಿ, ಬೆಳೆಸಿದ್ದರು. ಹೊನಲು-ಬೆಳಕಿನ ಪಂದ್ಯಗಳ ರೆಫರಿ, ಸ್ಕೋರ್ ಬರೆಯುವ ಕಾರ್ಯವನ್ನೂ ಅವರು ನಿರ್ವಹಿಸಿದ್ದರು.
ಪ್ರತಿವರ್ಷ ಪಾಂಡೇಶ್ವರದಲ್ಲಿ ನಡೆಯುವ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಸಾಧಕ ವಿದ್ಯಾರ್ಥಿಗಳು, ಅಂಗವಿಕಲರು, ಆಟೊ ಚಾಲಕರನ್ನು ಸನ್ಮಾನಿಸಿ ಗೌರವಿಸುತ್ತಿದ್ದರು. ಜೊತೆಗೆ ಸರ್ವಧರ್ಮ ಸಹಿಷ್ಣು ಆಗಿದ್ದರು. ಮೃತರನ್ನು ಸೋಮವಾರ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
ಸಂತಾಪ: 45ನೇ ಪೋರ್ಟ್ ವಾರ್ಡ್‌ನ ಮನಪಾ ಸದಸ್ಯ ಲತೀಫ್, ಪಾಂಡೇಶ್ವರ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಸಂತಾಪ ಸೂಚಿಸಿದರು.