ಜಮ್ಮು ಕಾಶ್ಮೀರ ಎನ್‍ಕೌಂಟರ್: ಹಿಜ್ಬುಲ್ ಸೇರಿದ್ದ ಯೋಧ ಸಹಿತ ಇಬ್ಬರು ಸಾವು

Update: 2018-11-06 08:08 GMT

ಶ್ರೀನಗರ, ನ. 6: ಜಮ್ಮು ಕಾಶ್ಮೀರದ ಶೋಪಿಯನ್‍ನಲ್ಲಿ ಇಂದು  ಸುರಕ್ಷಾ ಪಡೆಗಳೊಂದಿಗೆ ನಡೆದ ಎನ್‍ಕೌಂಟರ್ ನಲ್ಲಿ  ಹತ್ಯೆಗೀಡಾದ ಇಬ್ಬರು ಉಗ್ರರಲ್ಲಿ  ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ್ದ ಮಾಜಿ ಸೇನಾ ಜವಾನನೂ ಸೇರಿದ್ದಾನೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ಝೈನಪೋರ ಎಂಬಲ್ಲಿ  ಉಗ್ರರು ಅಡಗಿಕೊಂಡಿದ್ದಾರೆಂಬ ಹಿನ್ನೆಲೆಯಲ್ಲಿ ಅಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ ನಡೆದಿತ್ತು.

ಮೃತ ಮಾಜಿ ಜವಾನನನ್ನು ಇದ್ರೀಸ್ ಸುಲ್ತಾನ್ ಎಂದು ಗುರುತಿಸಲಾಗಿದೆ. ಜಮ್ಮು ಕಾಶ್ಮೀರ ಲೈಟ್ ಇನ್ಫೆಂಟ್ರಿ ರೆಜಿಮೆಂಟ್  ತೊರೆದು ಎಪ್ರಿಲ್ ನಲ್ಲಿ ಉಗ್ರ ಸಂಘಟನೆ ಸೇರಿದ್ದ ಆತ ಛೋಟಾ ಅಬ್ರಾರ್ ಎಂದೂ ಗುರುತಿಸಲ್ಪಟ್ಟಿದ್ದ. ಎನ್‍ಕೌಂಟರ್ ನಲ್ಲಿ ಸಾವಿಗೀಡಾದ ಇನ್ನೋರ್ವ ನನ್ನು ಅಮೀರ್ ಹುಸೈನ್ ರಾಥರ್ ಎಂದು ಗುರುತಿಸಲಾಗಿದೆ.

ಎನ್‍ಕೌಂಟರ್ ನಡೆದ ಸ್ಥಳದಲ್ಲಿ ಕೆಲವು ಸ್ಫೋಟಕಗಳು ಪತ್ತೆಯಾಗಿದ್ದು, ಅಪಾಯಕಾರಿಯಾಗಬಹುದಾದುದರಿಂದ ಆ ಸ್ಥಳದ ಜನರಿಗೆ ಮನೆಯಿಂದ ಹೊರ ಬಾರದಂತೆ ಪೊಲೀಸರು ಹೇಳಿದ್ದಾರೆ.

ಹಲವಾರು ಶಸ್ತ್ರಾಸ್ತ್ರಗಳನ್ನೂ ಎನ್‍ಕೌಂಟರ್ ನಡೆದ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News