ಶಬರಿಮಲೆ : ಮಹಿಳೆಯ ದೇವಳ ಪ್ರವೇಶ ಕುರಿತಂತೆ ಘರ್ಷಣೆ; ಕ್ಯಾಮರಾಮ್ಯಾನ್ ಗೆ ಗಾಯ

Update: 2018-11-06 09:01 GMT

ಶಬರಿಮಲೆ, ನ. 6: ಐವತ್ತು ವರ್ಷದ ಕೆಳಗಿನ ಪ್ರಾಯದ ಮಹಿಳೆಯೊಬ್ಬರು ಶಬರಿಮಲೆ ಅಯ್ಯಪ್ಪ ದೇವಳ ಪ್ರವೇಶಿಸಲು ಯತ್ನಿಸಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಭುಗಿಲೆದ್ದ ಘರ್ಷಣೆಗಳಲ್ಲಿ ಸುದ್ದಿ ಸಂಸ್ಥೆಯೊಂದರ ಕ್ಯಾಮರಾ ಮ್ಯಾನ್ ಗಾಯಗೊಂಡಿದ್ದಾರೆ.

ನೂರಾರು ಪ್ರತಿಭಟನಾಕಾರರು ಸನ್ನಿಧಾನಂ ಸುತ್ತ  ಜಮಾಯಿಸಿದರಲ್ಲದೆ ಕೆಲವರು ಮಾಧ್ಯಮದ ವಿರುದ್ಧ ತಮ್ಮ ಆಕ್ರೋಶ ತೋರ್ಪಡಿಸಿಕೊಂಡಿದ್ದಾರೆ.

ತ್ರಿಶ್ಶೂರಿನ ಲಲಿತಾ ಎಂಬಾಕೆ ತನ್ನ ಪುತ್ರನ ಜತೆ  ದೇವಳ ಭೇಟಿಗೆ ಬಂದಿದ್ದೇ ಈ ಘರ್ಷಣೆಗೆ ಕಾರಣವಾಯಿತು. ಆಕೆಗೆ 52 ವರ್ಷ ಎಂದು ಪೊಲೀಸರು ದೃಢಪಡಿಸಿದ ನಂತರವಷ್ಟೇ ಆಕೆಗೆ ದೇವಳ ಭೇಟಿ ನೀಡಲು ಅನುಮತಿಸಲಾಯಿತು. ''ನನಗೇನೂ ಭಯವಿಲ್ಲ. ನನಗೆ ಅಯ್ಯಪ್ಪನ ದರ್ಶನವಾಗಬೇಕು'' ಎಂದು ಲಲಿತಾ  ಸುದ್ದಿಗಾರರಿಗೆ ತಿಳಿಸಿದರು.

ಎರಡು ದಿನದ ವಿಶೇಷ ಪೂಜೆಗಾಗಿ ಸೋಮವಾರ ಸಂಜೆ ಶಬರಿಮಲೆ ದೇವಳದ ಬಾಗಿಲು ತೆರೆಯಲಾಗಿತ್ತು. ದೇವಳಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರೂ  ಪ್ರವೇಶಿಸಬಹುದೆಂಬ ಸುಪ್ರೀಂ ಕೋರ್ಟಿನ ಸೆಪ್ಟೆಂಬರ್ 28ರ ಆದೇಶದ ಹೊರತಾಗಿಯೂ ಇಲ್ಲಿಯ ತನಕ 10 ರಿಂದ 50 ವರ್ಷ ವಯೋಮಿತಿಯ ಒಬ್ಬರೇ ಒಬ್ಬರು ಮಹಿಳೆಗೆ ದೇವಳ ಪ್ರವೇಶಿಸುವುದು ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News