×
Ad

ಮಂಗಳೂರು: ಮರಳು ನೀತಿಗೆ ಆಗ್ರಹಿಸಿ ಸಿಡಬ್ಲ್ಯುಎಫ್ಐ ಧರಣಿ

Update: 2018-11-06 17:35 IST

ಮಂಗಳೂರು, ನ.6: ಕರಾವಳಿ ಜಿಲ್ಲೆಗಳಲ್ಲಿ ಮರಳು ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯಿಸಿ ಮತ್ತು ಜನಪರ ಮರಳು ನೀತಿಗಾಗಿ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಡಬ್ಲುಎಫ್‌ಐ) ದ.ಕ.ಜಿಲ್ಲಾ ಸಮಿತಿ ಮಂಗಳವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿತು.

ಕಳೆದ ಹಲವು ಸಮಯದಿಂದ ಜಿಲ್ಲೆಯಲ್ಲಿ ಮರಳು ಅಭಾವ ಸೃಷ್ಟಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಚಿವರು, ಮುಖ್ಯಮಂತ್ರಿಗೆ ಮನವಿ ಸಲ್ಲಸಿದರೂ ಕೂಡಾ ಪ್ರಯೋಜನವಾಗಿಲ್ಲ. ಮರಳಿನ ಕೃತಕ ಅಭಾವದಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಕುಂಠಿತಗೊಂಡಿವೆ. ಇದರ ನೇರ ಪರಿಣಾಮವು ಕೂಲಿ ಕಾರ್ಮಿಕರು ಮತ್ತವರ ಕುಟುಂಬದ ಮೇಲಾಗುತ್ತಿವೆ. ಹಾಗಾಗಿ ಸರಕಾರ ಶೀಘ್ರ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ರೂಪಿಸಬೇಕು ಮತ್ತು ಮರಳು ಅಭಾವ ನೀಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭ ಯೋಗೀಶ್ ಜಪ್ಪಿನಮೊಗರು, ಸುನೀಲ್ ಕುಮಾರ್ ಬಜಾಲ್, ಜಯಂತ್ ನಾಯಕ್, ಜನಾರ್ದನ ಕುತ್ತಾರ್, ರಾಮಣ್ಣ ವಿಟ್ಲ, ರಾಮಚಂದ್ರ ಪಜೀರ್, ದಿನೇಶ್ ಶೆಟ್ಟಿ ಜಪ್ಪಿನಮೊಗರು ಹಾಗು ಇತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News