ಶಬರಿಮಲೆ ವಿಚಾರದಲ್ಲಿ ಅಸಾಂವಿಧಾನಿಕ ಭಾಷಣ ಮಾಡಿದ ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳಿ

Update: 2018-11-06 13:52 GMT

ಹೊಸದಿಲ್ಲಿ, ನ.6: ಕೇರಳದ ಕಣ್ಣೂರಿನಲ್ಲಿ ಮಾಡಿದ ಅಸಾಂವಿಧಾನಿಕ ಭಾಷಣಕ್ಕಾಗಿ ಬಿಜೆಪಿ ನಾಯಕ ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು 50ಕ್ಕೂ ಹೆಚ್ಚು ನಿವೃತ್ತ ಐಎಎಸ್ ಮತ್ತು ಐಎಫ್ ಎಸ್ ಅಧಿಕಾರಿಗಳು ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಪ್ರಧಾನ ಮಂತ್ರಿ, ಹಾಗು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಗೆ ಸಂಬಂಧಿಸಿ ಮಾತನಾಡಿದ್ದ ಶಾ, ಪ್ರತಿಭಟನಕಾರರಿಗೆ ಬೆಂಬಲ ವ್ಯಕ್ತಪಡಿಸಿದ್ದರು. “ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಬಂಧಿಸುತ್ತಾ ಮುಂದುವರಿದರೆ ನಾವು ಈ ಸರಕಾರವನ್ನು ಕಿತ್ತೆಸೆಯಲಿದ್ದೇವೆ” ಎಂದಿದ್ದರು.

ಅಮಿತ್ ಶಾ ಅವರ ಭಾಷಣವು ಭಯ ಹುಟ್ಟಿಸುವಂತಿತ್ತು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದವರು ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್, ಪ್ರಧಾನ ಮಂತ್ರಿ ಹಾಗು ರಾಷ್ಟ್ರಪತಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News