ಫೈಝಾಬಾದ್ ಜಿಲ್ಲೆ ಇನ್ನು ಮುಂದೆ 'ಅಯೋಧ್ಯೆ’ಯಾಗಲಿದೆ: ಸಿಎಂ ಆದಿತ್ಯನಾಥ್

Update: 2018-11-06 13:47 GMT
ದೀಪಾವಳಿ ಹಬ್ಬದ  ಅಂಗವಾಗಿ  ಮಂಗಳವಾರ  ನಡೆದ ಕಾರ್ಯಕ್ರಮದಲ್ಲಿ ರಾಮ , ಸೀತೆ , ಲಕ್ಷ್ಮಣ ವೇಷ ಧರಿಸಿದವರ ಜೊತೆ ಉತ್ತರ  ಪ್ರದೇಶ ಮುಖ್ಯ ಮಂತ್ರಿ ಆದಿತ್ಯನಾಥ್  ಹಾಗೂ ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಜಿಮ್ ಜಂಗ್ ಸೂಕ್ .

ಲಕ್ನೋ, ನ.6: ಐತಿಹಾಸಿಕ ಅಲಹಾಬಾದ್ ನಗರವನ್ನು  ‘ಪ್ರಯಾಗ್ ರಾಜ್ ‘ ಎಂದು  ಮರು ನಾಮಕರಣ ಮಾಡುವ  ಉತ್ತರ ಪ್ರದೇಶ ಸರಕಾರದ ಪ್ರಸ್ತಾವನೆಗೆ  ರಾಜ್ಯಪಾಲ ರಾಮ್ ನಾಯಕ್ ಅಂಕಿತ ಹಾಕಿರುವ ಬೆನ್ನಲ್ಲೇ ಫೈಝಾಬಾದ್ ಜಿಲ್ಲೆ ಇನ್ನು ಮುಂದೆ ಅಯೋಧ್ಯೆಯಾಗಲಿದೆ ಎಂದು ಉ.ಪ್ರದೇಶ ಸಿಎಂ ಆದಿತ್ಯನಾಥ್ ಹೇಳಿದ್ದಾರೆ.

ದೀಪಾವಳಿ ಹಬ್ಬದ  ಅಂಗವಾಗಿ  ಮಂಗಳವಾರ  ನಡೆದ ಕಾರ್ಯಕ್ರಮದಲ್ಲಿ  ಉತ್ತರ  ಪ್ರದೇಶ ಮುಖ್ಯ ಮಂತ್ರಿ ಆದಿತ್ಯನಾಥ್  ಫೈಝಾಬಾದ್  ನಗರದ ಹೆಸರನ್ನು ಆಯೋಧ್ಯೆ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಹೇಳಿದ್ದಾರೆ. ಉತ್ತರ ಆಯೋಧ್ಯೆಗೆ  ಹೊಸ ವಿಮಾನ ನಿಲ್ದಾಣ ಮತ್ತು ಮೆಡಿಕಲ್ ಕಾಲೇಜು ಮಂಜೂರಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನೂತನ ವಿಮಾನ ನಿಲ್ದಾಣಕ್ಕೆ ಶ್ರೀರಾಮ ಮತ್ತು ಮಡಿಕಲ್ ಕಾಲೇಜಿಗೆ ದಶರಥ ಮಹಾರಾಜನ  ಹೆಸರಿನ್ನಡಲಾಗುವುದು  ಎಂದು ಹೇಳಿದ್ದಾರೆ. ಆಯೋಧ್ಯೆಯ ಶ್ರೀರಾಮ ಜನ್ಮ ಭೂಮಿ -ಬಾಬರಿ ಮಸೀದಿ ಜಮೀನು ವಿವಾದ ಇತ್ಯರ್ಥ ವಿಳಂಬವಾಗಿರುವ ಹಿನ್ನೆಲೆಯಲ್ಲಿ  ಮುಖ್ಯ ಮಂತ್ರಿ ಆದಿತ್ಯನಾಥ್ ಅವರು ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ  ಮತದಾರರನ್ನು ಸೆಳೆಯುವ ಉದ್ದೇಶಕ್ಕಾಗಿ  ಹೊಸ ಹೊಸ ಯೋಜನೆಗಳಿಗೆ ಕೈ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News