ಪಡುಬಿದ್ರೆ : ಉಮ್ರಾಕ್ಕೆ ತೆರಳಿದ ಯಾತ್ರಾರ್ಥಿ ಮೃತ್ಯು

Update: 2018-11-06 14:18 GMT

ಪಡುಬಿದ್ರೆ, ನ. 6: ಉಮ್ರಾ ಯಾತ್ರೆಗೆ ತೆರಳಿದ್ದ ಪಡುಬಿದ್ರೆಯ ಮಹಿಳೆಯೋರ್ವರು ಉಮ್ರಾ ನೆರವೇರಿಸುವ ವೇಳೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಜೆ ನಡೆದಿದೆ.

ಮೃತ ಮಹಿಳೆಯನ್ನು ಪಡುಬಿದ್ರೆ  ಕಂಚಿನಡ್ಕ ನಿವಾಸಿ ಅಸ್ಮಾ (38) ಎಂದು ಗುರುತಿಸಲಾಗಿದೆ.

ಅವರು ತಮ್ಮ ಕುಟುಂಬಸ್ಥರೊಂದಿಗೆ ನ. 4ರಂದು ಖಾಸಗಿ ಹಜ್ ಟೂರ್ಸ್‌ ಸಂಸ್ಥೆಯ ಮೂಲಕ ತೆರಳಿದ್ದರು. ಸೋಮವಾರ ಸಂಜೆಯ ವೇಳೆ ಉಮ್ರಾ ನೆರೆವೇರಿಸುವ ವೇಳೆ ಬಿದ್ದು ಮೃತಪಟ್ಟರು. ಮೃತದೇಹವನ್ನು ಮಂಗಳವಾರ ಮಕ್ಕಾದಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News