ಮಂಗಳೂರು: ಐವನ್ ಡಿಸೋಜ ನೇತೃತ್ವದಲ್ಲಿ ಗೂಡುದೀಪ ಸ್ಪರ್ಧೆ
ಮಂಗಳೂರು, ನ.6: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೂಡುದೀಪ, ಭಾಷಣ ಚಿತ್ರಕಲಾ ಸ್ಪರ್ಧೆಗಳು ನಗರದ ಪುರಭವನದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದಲ್ಲಿ 1,000 ಮಂದಿಗೆ ಅಕ್ಕಿ ವಿತರಣೆ ಮತ್ತು ಅಂತಾರಾಷ್ಟ್ರೀಯ ಸೆಕ್ಸೋಪೋನ್ ಸಂಗೀತ ವಾದಕ ಮಚ್ಚೇಂದ್ರನಾಥ್ ಮಂಗಳಾದೇವಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಕೆ. ಅನಂತ ಪಧ್ಮನಾಭ ಅಸ್ರಣ್ಣ, ಸಿಎಸ್‌ಐ ಸದರ್ನ್ ಡಯಾಸಿಸ್ ಧರ್ಮಾಧ್ಯಕ್ಷ ರೆ.ಫಾ. ಮೋಹನ್ ಮನೋರಾಜ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಉದ್ಯಮಿಗಳಾದ ಎ. ಸದಾನಂದ ಶೆಟ್ಟಿ, ಎ.ಜೆ. ಶೆಟ್ಟಿ, ಯೆನೆಪೊಯ ಅಬ್ದುಲ್ಲ ಕುಂಞಿ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಂಗಳೂರು ಮೇಯರ್ ಭಾಸ್ಕರ್, ದಿಲ್ ರಾಜ್ ಆಳ್ವ, ಇಬ್ರಾಹೀಂ ಕೊಡಿಜಾಲ್, ಸುನಿಲ್ ಪಾಯಸ್, ಹೇಮರಾಜ್ ಶೆಟ್ಟಿ ಪತ್ತೂರು, ಅನಿಲ್ ಲೋಬೊ ಪೆರ್ಮುದೆ, ರಾಲ್ಫಿ ಡಿ ಕೋಸ್ಟ, ಅಮೃತ್ ವಿ ಕದ್ರಿ, ಶಶಿದರ್ ಹೆಗ್ಡೆ, ಯುಪಿ ಇಬ್ರಾಹೀಂ, ಉಪ ಮೇಯರ್ ಮುಹಮ್ಮದ್ ಕುಂಜತ್ ಬೈಲ್, ದಿನಕರ್ ಶೆಟ್ಟಿ, ಲತೀಫ್, ಲೊಕೇಶ್ ಹೆಗ್ಡೆ ಪುತ್ತೂರು, ಎ.ಎಚ್. ಖಾದರ್, ದಿನೇಶ್ ಆಳ್ವ, ಮೋಹನ್ ದಾಸ್ ಶೆಟ್ಟಿ, ಅಬ್ದುಲ್ ಅಝೀಝ್, ಯಶ್ವಂತ್ ಶೆಟ್ಟಿ ಅಳೆಯಂಗಡಿ, ಕೇಶವ ಮರೋಳಿ, ಖಾದರ್ ಕುದ್ರೋಳಿ, ಇಂಟೆಕ್ ಅಧ್ಯಕ್ಷ ಪುನಿತ್ ಶೆಟ್ಟಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.