ಉಪ ಚುನಾವಣೆಯ ವಿಜಯ ಲೋಕಸಭಾ ಚುನಾವಣೆಗೆ ದಿಕ್ಸೂಚಿ : ಉಮ್ಮರ್ ಫಾರೂಕ್
ಬಂಟ್ವಾಳ, ನ. 6: ಮೈತ್ರಿ ಸರಕಾರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸಂಭ್ರಮದಲ್ಲಿ ಉಳ್ಳಾಲ ಕ್ಷೇತ್ರದ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಹಾಗೂ ಸಿಹಿತಿಂಡಿ ಹಂಚುವುದರ ಮೂಲಕ ಹರ್ಷ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೆ.ಪಿ.ಸಿ.ಸಿ ಚುನಾವಣಾ ಪ್ರಚಾರ ಸಮಿತಿ ಸದಸ್ಯ ಹಾಗೂ ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಯಾದ ಎಫ್ ಉಮರ್ ಫಾರೂಕ್ ಫರಂಗಿಪೇಟೆ ಅವರು ಐದು ಕ್ಷೇತ್ರಗಳ ಪೈಕಿ ಮೈತ್ರಿಕೂಟದ ಸರಕಾರ ನಾಲ್ಕು ಕ್ಷೇತ್ರದಲ್ಲಿ ವಿಜಯಗಳಿಸಿರುವುದು ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.
ಕೋಮುವಾದಿಗಳಿಗೆ ಇಲ್ಲಿ ಸ್ಥಾನ ಇಲ್ಲ ಎಂಬುದನ್ನು ಇಲ್ಲಿನ ಜನ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ನಿಂದ ಮಾತ್ರ ಜನಪರ ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಸಾಧ್ಯ ಎಂಬುದು ಬಳ್ಳಾರಿಯ ಜನತೆ ಸ್ಪಷ್ಟ ಪಡಿಸಿದರು. ದಿನನಿತ್ಯದ ಮೂಲಭೂತ ಸೌಕರ್ಯಗಳ ಜೊತೆ ರೆಫಲ್ ಹಗರಣದಂತಹ ಅನೇಕ ವಿಚಾರಗಳನ್ನು ಮುಂದಿಟ್ಟು ಜನ ಮೋದಿ ಸರಕಾರವನ್ನು ವಿರೋಧ ಬಯಸಿದ್ದಾರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವ ದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಬಳ್ಳಾರಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ಉಸ್ತುವಾರಿ ವಹಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೆವೆ ಎಂದರು.
ಪುದು ಗ್ರಾ.ಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಪುದು ಗ್ರಾ.ಪಂ ಸದಸ್ಯರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್, ಪುದು ಗ್ರಾ.ಪಂ ಸದಸ್ಯರಾದ ಇಕ್ಬಾಲ್ ಸುಜೀರ್, ಮುಸ್ತಫಾ ಅಮೆಮ್ಮಾರ್, ಹುಸೈನ್ ಪಾಡಿ, ಮುಡಿಪು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ತಿಯಾಝ್ ತುಂಬೆ, ಯುವ ನಾಯಕ ರಫೀಕ್ ಪೇರಿಮಾರ್, ಶೌಕತ್ ಅಲಿ, ಮಜೀದ್ ಪೇರಿಮಾರ್, ಗಫೂರ್ ಫರಂಗಿಪೇಟೆ, ಅಬೂಬಕರ್ ಕುಂಜತ್ಕಳ, ಸಲೀಂ ಫರಂಗಿಪೇಟೆ, ಅಶ್ವದ್ ಫರಂಗಿಪೇಟೆ, ಇಬ್ರಾಹಿಂ ವಳವೂರ್, ಸಲಾಂ ಮಲ್ಲಿ, ಅಹಮದ್ ದಿಲ್ ಪೇರಿಮಾರ್, ಇಸ್ಮಾಯಿಲ್ ಕುಂಜತ್ಕಳ, ಬಾಫಿ ಫರಂಗಿಪೇಟೆ, ಸಿರಾಜ್ ಪೇರಿಮಾರ್, ಅಬೂಬಕ್ಕರ್ ಅತೀಕ್ ಹಾಗೂ ಪುದು ವಲಯ ಕಾಂಗ್ರೆಸ್ ಸಮಿತಿಯ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು.