ದುಬೈನಲ್ಲಿ ನೀರವ್ ಮೋದಿ ಕುಟುಂಬಕ್ಕೆ ಸೇರಿದ 56 .8 ಕೋಟಿ ರೂ. ಮೌಲ್ಯದ ಆಸ್ತಿಗಳ ಮುಟ್ಟುಗೋಲು

Update: 2018-11-06 17:21 GMT

ಹೊಸದಿಲ್ಲಿ, ನ. 6: ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ಬಹುಕೋಟಿ ಹಣ ವಂಚನೆ ಪ್ರಕರಣದ ಪ್ರಧಾನ ಆರೋಪಿ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಕುಟುಂಬಕ್ಕೆ ಸೇರಿದ ದುಬೈನಲ್ಲಿರುವ 56.8  ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿದೆ. 

ನೀರವ್ ಮೋದಿ     ಹಾಗೂ  ಕುಟುಂಬಕ್ಕೆ ಸೇರಿದ ಒಟ್ಟು 11 ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ತಿಂಗಳು ದುಬೈನಲ್ಲಿ  ಜಾರಿ ನಿರ್ದೇಶನಾಲಯವು ನ್ಯೂಯಾರ್ಕ್ ನಲ್ಲಿ 637 ಕೋಟಿ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News