×
Ad

ನ.12ರಂದು ಯೆನೆಪೊಯ ವಿವಿಯಲ್ಲಿ ಬಯೋ ಕ್ವಿಝ್

Update: 2018-11-07 18:30 IST

ಮಂಗಳೂರು, ನ.7: ರಾಜ್ಯದ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ, ಮಾಹಿತಿ ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಲಯ ಮಟ್ಟದ ಬಯೋ ಕ್ವಿಝ್ ಸ್ಪರ್ಧೆಯನ್ನು ನ.12ರಂದು ಯೆನೆಪೊಯ ವಿಶ್ವವಿದ್ಯಾನಿಲಯದ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಇದರಲ್ಲಿ ಬಿಎಸ್ಸಿ, ಬಿಎಸ್ಸಿ (ಕೃಷಿ), ಬಿ-ಫಾರ್ಮಾ, ಬಿಟೆಕ್ ಹಾಗೂ ಬಿಇ (ಬಯೋಟೆಕ್ನಾಲಜಿ, ಬಯೋಮೆಡಿಕಲ್ ಇಂಜಿನಿಯರಿಂಗ್ ಮತ್ತು ಬಯೋಮೆಡಿಕಲ್ ಸಿಗ್ನಲ್ ಪ್ರೊಸೆಸ್ಸಿಂಗ್ ಹಾಗೂ ಇನ್‌ಸ್ಟ್ರುಮೆಂಟೇಶನ್) ಅಧ್ಯಯನ ಮಾಡುತ್ತಿರುವವರು ಭಾಗವಹಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ನೀಡಲಾಗುವುದು. ವಲಯಮಟ್ಟದ ವಿಜೇತರಿಗೆ ದ್ವಿತೀಯ ಹಂತದ ಸ್ಪರ್ಧೆಯು ಬೆಂಗಳೂರಿನ ಅರಮನೆ ಮೈದಾನದಲ್ಲಿ ನ.30ರಂದು ನಡೆಯಲಿದೆ.

ವಿಜೇತರಿಗೆ ಪ್ರಥಮ 75,000 ರೂ., ದ್ವಿತೀಯ 50,000 ರೂ., ತೃತೀಯ 25,000 ರೂ. ಹಾಗೂ ಚತುರ್ಥ 10,000 ರೂ. ಬಹುಮಾನಗಳನ್ನು ನೀಡಲಾಗುತ್ತದೆ. ದ್ವಿತೀಯ ಹಂತದ ಸ್ಪರ್ಧೆಗೆ ಆಯ್ಕೆಯಾದ ಎಲ್ಲ ಸ್ಪರ್ಧಾಳುಗಳಿಗೆ ಪ್ರಯಾಣ ಭತ್ತೆ ಸಿಗಲಿದೆ.

ತಂಡದಲ್ಲಿ ಇಬ್ಬರು ಸದಸ್ಯರಿದ್ದು, ಕಾಲೇಜಿನ ಹೆಸರು, ವಲಯ, ತಂಡದ ಸದಸ್ಯರ ಹೆಸರು, ದೂ.ಸಂ. ಹಾಗೂ ಮಾಹಿತಿಯನ್ನು indiabioquiz@gmail.com'BioQuiz' ಇ-ಮೇಲ್ ಗೆ ಕಳುಹಿಸತಕ್ಕದ್ದು ಅಥವಾ ಎಂದು ಟೈಪ್ ಮಾಡಿ ಎಸ್ಸೆಮ್ಮೆಸ್/ ವಾಟ್ಸ್‌ಆ್ಯಪ್ ಮೂಲಕ 9900713006 ಗೆ ಕಳುಹಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News