ವಿಶ್ವಸಂಸ್ಥೆಯಲ್ಲಿ ದೀಪದ ಅಂಚೆಚೀಟಿಗಳ ಬಿಡುಗಡೆ
Update: 2018-11-07 20:07 IST
ವಿಶ್ವಸಂಸ್ಥೆ, ನ. 7: ದೀಪಾವಳಿಯ ಸಂದರ್ಭದಲ್ಲಿ ವಿಶ್ವಸಂಸ್ಥೆಯು ದೀಪಗಳನ್ನು ಒಳಗೊಂಡ ಎರಡು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ.
‘‘ದೀಪಗಳ ಹಬ್ಬದ ಶುಭ ಸಂದರ್ಭದಲ್ಲಿ ಮೊದಲ ಸುತ್ತಿನ ದೀಪಾವಳಿ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿರುವುದಕ್ಕಾಗಿ ‘ಯುಎನ್ ಸ್ಟಾಂಪ್ಸ್’ಗೆ ಧನ್ಯವಾದಗಳು’’ ಎಂಬುದಾಗಿ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ಅಂಚೆ ಚೀಟಿಗಳ ವೌಲ್ಯ 1.15 ಡಾಲರ್ (ಸುಮಾರು 83 ರೂಪಾಯಿ). ಇದು ಅಂತಾರಾಷ್ಟ್ರೀಯ ಏರ್ ಮೇಲ್ ಪತ್ರಗಳ ಕನಿಷ್ಠ ದರವಾಗಿದೆ.
ಈ ಅಂಚೆ ಚೀಟಿಗಳನ್ನು ಕಳೆದ ತಿಂಗಳು ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿತ್ತು ಹಾಗೂ ಈಗ ಅದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮತ್ತು ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯವಿದೆ.