×
Ad

ದೀಪಾವಳಿ: ವಾಘಾ ಗಡಿಯಲ್ಲಿ ಸಿಹಿ ಹಂಚಿಕೊಂಡ ಭಾರತ-ಪಾಕ್ ಸೈನಿಕರು

Update: 2018-11-07 20:25 IST

ಅಮೃತಸರ, ನ.7: ಪಂಜಾಬ್‌ನ ವಾಘಾ ಗಡಿಯಲ್ಲಿ ದೀಪಾವಳಿ ಪ್ರಯುಕ್ತ ಭಾರತದ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಹಾಗೂ ಪಾಕಿಸ್ತಾನ್ ರೇಂಜರ್ಸ್(ಗಡಿಭದ್ರತಾ ಪಡೆ) ಪಡೆಯ ಸೈನಿಕರು ಸಿಹಿತಿಂಡಿ ವಿನಿಮಯ ಮಾಡಿಕೊಂಡರು.

ಸದ್ಭಾವನೆಯ ಸಂಕೇತವಾಗಿ ಪ್ರತೀ ವರ್ಷ ಉಭಯ ದೇಶಗಳ ಸೈನಿಕರು ಪರಸ್ಪರ ದೇಶಗಳ ರಾಷ್ಟ್ರೀಯ ಹಬ್ಬ ಅಥವಾ ಧಾರ್ಮಿಕ ಹಬ್ಬಗಳ ಸಂದರ್ಭ ಗಡಿಯಲ್ಲಿ ಸಿಹಿ ವಿನಿಮಯ ಮಾಡಿಕೊಳ್ಳುತ್ತಾರೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಈದ್ ಹಾಗೂ ದೀಪಾವಳಿ ಆಚರಣೆ ಸಂದರ್ಭದಲ್ಲಿ ಸಿಹಿ ಹಂಚಿಕೊಳ್ಳುವ ಸಂಪ್ರದಾಯವಿದೆ. ಆದರೆ, ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿ ಮತ್ತು ಗಡಿಭಾಗದಲ್ಲಿ ಉದ್ವಿಗ್ನತೆ ಇದ್ದ ಕಾರಣ ಈ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸೈನಿಕರು ಪರಸ್ಪರ ಸಿಹಿ ಹಂಚಿಕೊಂಡಿರಲಿಲ್ಲ. 2016ರಲ್ಲಿ ಉರಿಯಲ್ಲಿರುವ ಭಾರತೀಯ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಗಡಿಯಲ್ಲಿ ಸೈನಿಕರು ದೀಪಾವಳಿ ಸಿಹಿ ಹಂಚಿಕೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News