×
Ad

​ ಡಾ.ಚೂಂತಾರು ಅವರ ಬಾಯಿ ಕಾನ್ಸರ್ ಮಾರ್ಗದರ್ಶಿ ‘ಅರಿವು’ ಪುಸ್ತಕ ಬಿಡುಗಡೆ

Update: 2018-11-07 20:26 IST

ಮಂಗಳೂರು, ನ.7: ಡಾ.ಮುರಳಿ ಮೋಹನ ಚೂಂತಾರು ಅವರ ಬಾಯಿ ಕ್ಯಾನ್ಸರ್‌ಗೆ ಸಂಬಂಧಿಸಿದ ಮಾರ್ಗದರ್ಶಿ ‘ಅರಿವು’ ಪುಸ್ತಕ ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಬಿಡುಗಡೆಗೊಂಡಿತು.

 ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡಾ.ಚೂಂತಾರು ಈ ರೀತಿಯ ಕೃತಿಯನ್ನು ಹೊರತರುತ್ತಿರುವುದು ಒಂದು ಉತ್ತಮ ಪ್ರಯತ್ನ ಎಂದು ಶುಭ ಹಾರೈಸಿದರು.

 ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು.

ಕೃತಿ ಪ್ರಕಾಶನ ಸಂಸ್ಥೆ ಚೂಂತಾರು ಸರೊಜಿನಿ ಭಟ್ ಪ್ರತಿಷ್ಠಾನದ ಅಧ್ಯಕ್ಷ ಚೂಂತಾರು ಲಕ್ಷ್ಮೀನಾರಾಯಣ ಭಟ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News