ಕ್ಯಾಮರೂನ್: ಅಪಹೃತ ಶಾಲಾ ಮಕ್ಕಳ ಬಿಡುಗಡೆ

Update: 2018-11-07 15:34 GMT

ಯಾವುಂಡೇ (ಕ್ಯಾಮರೂನ್), ನ. 7: ಆಫ್ರಿಕ ಖಂಡದ ದೇಶ ಕ್ಯಾಮರೂನ್‌ನ ಇಂಗ್ಲಿಷ್ ಮಾತನಾಡುವ ವಲಯವೊಂದರಿಂದ ಬಂದೂಕುಧಾರಿಗಳು ರವಿವಾರ ಅಪಹರಿಸಿದ್ದ 79 ಶಾಲಾ ವಿದ್ಯಾರ್ಥಿಗಳು ಬಿಡುಗಡೆಗೊಂಡಿದ್ದಾರೆ ಎಂದು ದೇಶದ ಸಂಪರ್ಕ ಸಚಿವ ಇಸ್ಸಾ ಬಕಾರಿ ಚಿರೋಮ ಬುಧವಾರ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

 ‘‘ಎಲ್ಲ 79 ವಿದ್ಯಾರ್ಥಿಗಳು ಬಿಡುಗಡೆಗೊಂಡಿದ್ದಾರೆ’’ ಎಂದು ಅವರು ಹೇಳಿದರು. ಆದರೆ, ಅವರ ಬಿಡುಗಡೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ಅವರು ವಿವರಣೆಯನ್ನು ನೀಡಲಿಲ್ಲ.

ಸಂಘರ್ಷಪೀಡಿತ ಇಂಗ್ಲಿಷ್ ಮಾತನಾಡುವ ವಲಯದ ರಾಜಧಾನಿ ಬಮೆಂಡದ ಸಮೀಪದಿಂದ ಮಕ್ಕಳನ್ನು ಅಪಹರಿಸಲಾಗಿತ್ತು.

ಆದರೆ, ಅಪಹರಣಕಾರರು ಮಕ್ಕಳೊಂದಿಗೆ ಅಪಹರಿಸಿದ್ದ ಇಬ್ಬರು ಶಿಕ್ಷಕರನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News