ನೋಟು ನಿಷೇಧದ ‘ತುಘ್ಲಕ್ ಪ್ರಯೋಗ’ಕ್ಕೆ ಪ್ರಧಾನಿ ಮೋದಿ ಕ್ಷಮೆಯಾಚಿಸಲಿ: ಕಾಂಗ್ರೆಸ್

Update: 2018-11-07 16:03 GMT

ಹೊಸದಿಲ್ಲಿ,ನ.7: ಆರ್ಥಿಕತೆಯು ಕುಸಿದು ಬೀಳಲು ಮತ್ತು ಜನರ ಸಂಕಷ್ಟಗಳಿಗೆ ಕಾರಣವಾದ ‘ತುಘ್ಲಕ್ ’ ಪ್ರಯೋಗದ ಏಕಪಕ್ಷೀಯ ಪ್ರಯತ್ನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧದ ಎರಡನೇ ವರ್ಷಾಚರಣೆಯ ದಿನವಾದ ಗುರುವಾರ ದೇಶದ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಪಕ್ಷವು ಆಗ್ರಹಿಸಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆಗ್ರಹವನ್ನು ಮಂಡಿಸಿದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಅವರು,ನೋಟು ನಿಷೇಧ ಕ್ರಮದ ವಿರುದ್ಧ ಗುರುವಾರ ದೇಶಾದ್ಯಂತ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸಲಿದ್ದಾರೆ ಎಂದು ಘೋಷಿಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರ ನಾಯಕರೂ ರ್ಯಾಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ನೋಟು ನಿಷೇಧದಿಂದ ಜನರ ಸಂಕಷ್ಟಗಳು ಹೆಚ್ಚಾಗಿದ್ದು ಮತ್ತು ಆರ್ಥಿಕತೆಯು ಕುಸಿದಿದ್ದು ಬಿಟ್ಟರೆ ಹೆಚ್ಚಿನ ಯಾವುದೇ ಸಾಧನೆಯಾಗಿಲ್ಲ. ಇಂದು ದೇಶದಲ್ಲಿ 20176,ನ.8ರಂದು ಇದ್ದ ಹಣಕ್ಕಿಂತ ಹೆಚ್ಚಿನ ನಗದು ಚಲಾವಣೆಯಲ್ಲಿದೆ ಎಂದು ತಿವಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News