ಎಪಿಡಿ ಫೌಂಡೇಶನ್‌ಗೆ ‘ಎಂಎಸ್‌ಎಂಇ ಬೆಸ್ಟ್ ಸೋಶಿಯಲ್ ಎಂಟರ್‌ಪ್ರೈಸ್ ಅವಾರ್ಡ್’
ಮಂಗಳೂರು, ನ.7: ನಿಟ್ಟೆ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕರ್ಣಾಟಕ ಬ್ಯಾಂಕ್ ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಿದ್ದ ನಿಟ್ಟೆ-ಕೆಬಿಎಲ್ ಕಾನ್‌ಕ್ಲೇವ್ ಮತ್ತು ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ಸ್ ಸಮಾರಂಭದಲ್ಲಿ ಆ್ಯಂಟಿ ಪೊಲ್ಯೂಷನ್ ಡ್ರೈವ್(ಎಪಿಡಿ) ಪ್ರತಿಷ್ಠಾನಕ್ಕೆ ‘ಎಂಎಸ್‌ಎಂಇ ಬೆಸ್ಟ್ ಸೋಶಿಯಲ್ ಎಂಟರ್‌ಪ್ರೈಸಸ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.
ಸಂಸ್ಥಾಪಕ-ಮುಖ್ಯಸ್ಥ ಅಬ್ದುಲ್ಲಾ ಎ.ರೆಹಮಾನ್ ಮತ್ತು ಕಾರ್ಲ್ ಡಿಕುನ್ಹಾ ಮತ್ತು ಧನುಷ್ ದೇಸಾಯಿ ಅವರನ್ನೊಳಗೊಂಡ ಎಪಿಡಿಎಫ್ ತಂಡವು ಎಸ್ಕೆಎಫ್ ಬಾಯ್ಲರ್‌ಗಳ ವ್ಯವಸ್ಥಾಪಕ ನಿರ್ದೇಶಕ ರಾಮಕೃಷ್ಣ ಆಚಾರ್ ಮತ್ತು ನಿಟ್ಟೆ ವಿಶ್ವವಿದ್ಯಾಲಯದ ಡಾ.ಆಶಾಲತಾ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ನಗರದಲ್ಲಿನ ಘನತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವಲ್ಲಿ ಅದರ ವಿವಿಧ ಪ್ರವರ್ತಕ ಮಧ್ಯಸ್ಥಿಕೆಗಳಿಗಾಗಿ ಈ ಪ್ರಶಸ್ತಿ ನೀಡಲಾಗಿದೆ.
‘‘ಸಣ್ಣ ಸಂಸ್ಥೆಗಳ ಪ್ರಯತ್ನಗಳನ್ನು ದೊಡ್ಡ ಸಂಸ್ಥೆಗಳೊಂದಿಗೆ ಗುರುತಿಸಲು ನಾವು ಪ್ರಶಸ್ತಿ ಆಯೋಜಕರಿಗೆ ಕೃತಜ್ಞರಾಗಿರುತ್ತೇವೆ. ಇದು ನಿಜವಾಗಿಯೂ ಸಾರ್ವಜನಿಕ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಶ್ರಮಿಸಲು ತಮ್ಮ ಬದ್ಧತೆ ಹೆಚ್ಚಿಸಲು ಪ್ರೇರೇಪಿಸುತ್ತದೆ ಎಂದು ಪ್ರಶಸ್ತಿ ಸ್ವೀಕರಿಸಿದ ಅಬ್ದುಲ್ಲಾ ಎ. ರಹ್ಮಾನ್ ಹೇಳಿದರು.