×
Ad

ಅಂತ್ಯಸಂಸ್ಕಾರದ 2 ತಿಂಗಳ ಬಳಿಕ ‘ಸತ್ತ’ ವ್ಯಕ್ತಿ ಮರಳಿ ಬಂದ!

Update: 2018-11-07 22:54 IST

ಅಸ್ತಾನ (ಕಝಖ್‌ಸ್ತಾನ), ನ. 7: ‘ಸತ್ತ’ ಎರಡು ತಿಂಗಳ ಬಳಿಕ ವ್ಯಕ್ತಿಯೊಬ್ಬ ಪ್ರತ್ಯಕ್ಷರಾಗಿ ಕುಟುಂಬ ಸದಸ್ಯರನ್ನು ದಿಗ್ಭ್ರಮೆಗೊಳಿಸಿದ ಘಟನೆಯೊಂದು ಮಧ್ಯ ಏಶ್ಯದ ದೇಶ ಕಝಖ್‌ಸ್ತಾನದ ಟೋಮರ್ಲಿ ಎಂಬ ಗ್ರಾಮದಿಂದ ವರದಿಯಾಗಿದೆ.

63 ವರ್ಷದ ಐಗಲಿ ಸುಪುಗಲೀವ್ ಜುಲೈ ತಿಂಗಳಲ್ಲಿ ಮನೆಯಲ್ಲಿ ಯಾರಿಗೂ ಹೇಳದೆ ಹೋಗಿ ದೂರದ ಹೊಲವೊಂದರಲ್ಲಿ ನಾಲ್ಕು ತಿಂಗಳ ಕೆಲಸಕ್ಕೆ ಸೇರಿಕೊಂಡರು.
ಮನೆಯವರು ನಾಪತ್ತೆ ದೂರು ದಾಖಲಿಸಿದರು.
ಅವರು ನಾಪತ್ತೆಯಾದ ಎರಡು ತಿಂಗಳ ಬಳಿಕ ಕೊಳೆತ ಶವವೊಂದು ಪತ್ತೆಯಾಯಿತು. ಪೊಲೀಸರು ಅದರ ಡಿಎನ್‌ಎ ಪರೀಕ್ಷೆ ನಡೆಸಿದಾಗ ನಾಪತ್ತೆಯಾದ ವ್ಯಕ್ತಿಗೆ ಅದು 99.92 ಶೇಕಡ ಹೋಲಿಕೆಯಾಯಿತು. ಮನೆಯವರು ಆ ಶವ ಸುಪುಗಲೀವ್‌ರದ್ದು ಎಂಬುದಾಗಿ ತೀರ್ಮಾನಿಸಿದರು ಹಾಗೂ ಅಂತ್ಯಸಂಸ್ಕಾರ ನಡೆಸಿದರು.
ಆದರೆ, ಅಂತ್ಯಸಂಸ್ಕಾರ ನಡೆದ ಸ್ವಲ್ಪವೇ ದಿನದ ಬಳಿಕ ಸುಪುಗಲೀವ್ ಜೀವಂತವಾಗಿ ಪ್ರತ್ಯಕ್ಷರಾದರು ಎಂದು ‘ಮೆಟ್ರೊ’ ಪತ್ರಿಕೆ ವರದಿ ಮಾಡಿದೆ.
‘‘ಕೇವಲ ಡಿಎನ್‌ಎ ಪರೀಕ್ಷೆಯೊಂದರ ಆಧಾರದಲ್ಲಿ ಒಂದು ಶವ ಇಂಥವರದ್ದೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಉಳಿದ 0.08 ಶೇಕಡ ಸಾಧ್ಯತೆಯನ್ನು ನಾವು ಮರೆಯಬಾರದು’’ ಎಂದು ಡಿಎನ್‌ಎ ಪರೀಕ್ಷೆ ನಡೆಸಿದ ವಿಜ್ಞಾನಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News