×
Ad

ಮಸಾಜ್ ಪಾರ್ಲರ್‌ಗೆ ದಾಳಿ: ಇಬ್ಬರು ಮಹಿಳೆಯರ ರಕ್ಷಣೆ, ಓರ್ವನ ಸೆರೆ

Update: 2018-11-07 23:14 IST

ಮಂಗಳೂರು, ನ.7: ಅನೈತಿಕ ಚಟುವಟಿಕೆ ನಡೆಯುತ್ತಿದ್ದ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಆಯುರ್ವೇದ ಮಸಾಜ್ ಪಾರ್ಲರ್‌ವೊಂದಕ್ಕೆ ದಾಳಿ ನಡೆಸಿದ ಬಂದರು ಪೊಲೀಸರು ಇಬ್ಬರು ಮಹಿಳೆಯರನ್ನು ರಕ್ಷಿಸಿ, ಓರ್ವನನ್ನು ಬಂಧಿಸಿದ್ದಾರೆ.

ಫ್ರಾನ್ಸಿಸ್ ಪಿರೇರ ಎಂಬವರ ಮಾಲಕತ್ವದ ಮಸಾಜ್ ಪಾರ್ಲರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ವಯ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಅಲ್ಲಿದ್ದ ವಿಜಯಪುರದ ರಾಜು (20) ಎಂಬಾತನನ್ನು ಬಂಧಿಸಿದ್ದಾರೆ. ರಕ್ಷಣೆ ಮಾಡಲಾದ ಮಹಿಳೆಯರನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News