×
Ad

ನ.14ರಂದು ಕಿಲ್ಲೂರಿನಲ್ಲಿ ಆಧ್ಯಾತ್ಮಿಕ ಮಜ್ಲಿಸ್

Update: 2018-11-08 16:54 IST

ಮಂಗಳೂರು, ನ.8: ಕಿಲ್ಲೂರು ಜಂಇಯ್ಯತುಲ್ ಮಿಸ್ಬಾಹಿಲ್ ಹುದಾ ವತಿಯಿಂದ ನ.14ರಂದು ಬೆಳಗ್ಗೆ 9:30ಕ್ಕೆ ಬೆಳ್ತಂಗಡಿ ತಾಲೂಕಿನ ಕಿಲ್ಲೂರಿನಲ್ಲಿ ಸಂಘಟನೆಯ 19ನೇ ವಾರ್ಷಿಕ ಮಹಾಸಭೆ ಹಾಗೂ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ.

ಮೌಲಿದ್ ಪಾರಾಯಣ, ಬುರ್ದಾ ಮಜ್ಲಿಸ್, ಖತ್ಮುಲ್ ಕುರ್‌ಆನ್ ಹಾಗೂ ನಸೀಅತ್ ಮುಂತಾದ ಕಾರ್ಯಕ್ರಮಗಳು ಜರುಗಲಿದ್ದು, ಕಾಜೂರು ತಂಙಳ್, ಕಿಲ್ಲೂರು ತಂಙಳ್, ಕುಕ್ಕಾಜೆ ತಂಙಳ್, ಮಾಣಿ ಉಸ್ತಾದ್, ಅಬೂ ಸ್ವಾಲಿಹ್ ಮದನಿ ಮುಂತಾದ ಪ್ರಮುಖರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸೈಯದ್ ಬಶರ್ ಬುರ್ದಾ ಸಂಘ ಅಜಿಲಮೊಗರು ಹಾಗೂ ಆಶಿಕುರ್ರಸೂಲ್ ಬುರ್ದಾ ಸಂಘ ಪಾಣೆಮಂಗಳೂರು ಇವರಿಂದ ಬುರ್ದಾ ಆಲಾಪನೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News