ಕೊಯಿಲ ಸರಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ನಿರ್ಮಾಣ
ಬಂಟ್ವಾಳ, ನ.8: ಬಂಟ್ವಾಳ ರೋಟರಿ ಕ್ಲಬ್‌ನ ಹ್ಯಾಪಿ ಸ್ಕೂಲ್ ಯೋಜನೆಯಡಿ ಕೊಯಿಲ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಹೆಣ್ಣುಮಕ್ಕಳ ಶೌಚಾಲಯವನ್ನು ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್ ಪಿ. ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿರುತ್ತದೆ. ರೋಟರಿ ಕ್ಲಬ್ ಬಂಟ್ವಾಳ ಈ ಸರಕಾರಿ ಶಾಲೆಯನ್ನು ದತ್ತು ಪಡೆದು ಸುಸಜ್ಜಿತ ಶೌಚಾಲಯವನ್ನು ಒದಗಿಸಿಕೊಟ್ಟಿದೆ. ಜಾತಿ, ಮತ ಧರ್ಮದ ಭೇದವನ್ನು ಬಿಟ್ಟು ಸೇವೆಯಲ್ಲಿ ತೊಡಗಿಸಿಕೊಂಡಿರುವ ರೋಟರಿ ಕ್ಲಬ್ ವ್ಯಕ್ತಿಯಲ್ಲಿ ನಾಯಕತ್ವ ಗುಣವನ್ನು ಬೆಳೆಸಿ ಸಮಾಜಕ್ಕೆ ಉತ್ತಮ ನಾಗರಿಕರನ್ನು ನಿರ್ಮಿಸಿ ಕೊಡುತ್ತದೆ ಎಂದರು.
ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ, ಅಧ್ಯಕ್ಷತೆ ವಹಿಸಿದ್ದರು.
ವಲಯ 4ರ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್, ಕಾರ್ಯದರ್ಶಿ ಶಿವಾನಿ ಬಾಳಿಗ, ಶೌಚಾಲಯ ಪ್ರಾಯೋಜಕ, ಬಂಟ್ವಾಳ ರೋಟರಿ ಕ್ಲಬ್‌ನ ಪ್ರಥಮ ಮಹಿಳೆ ಮೇಘಾ ಆಚಾರ್ಯ, ಪೂರ್ವಾಧ್ಯಕ್ಷ ರಿತೇಶ್ ಬಾಳಿಗ, ವಲಯ ಲೆಫ್ಟಿನೆಂಟ್ ಸಂಜೀವ ಪೂಜಾರಿ, ಸುವರ್ಣ ವರ್ಷಾಚರಣೆ ಸಮಿತಿಯ ಸಂಚಾಲಕ ಡಾ.ರಮೇಶಾನಂದ ಸೋಮಾಯಾಜಿ, ವಲಯ ಕಾರ್ಯದರ್ಶಿ ನಾರಾಯಣ ಹೆಗ್ಡೆ, ರೋಟರಿ ಸದಸ್ಯರಾದ ಪ್ರಭಾಕರ ಪ್ರಭು, ಕರುಣಾಕರ ರೈ, ಮುಹಮ್ಮದ್ ಇಕ್ಬಾಲ್, ಪ್ರಕಾಶ್ ಬಾಳಿಗ, ಧನಂಜಯ ಬಾಳಿಗ, ರಾಮಣ್ಣ ರೈ, ಶಾಲಾ ಮಖ್ಯೋಪಾಧ್ಯಾಯ ಸುಧೀರ್, ಎಸ್‌ಡಿಎಂಸಿ ಸದಸ್ಯ ರಾಜೇಶ್ ಜೈನ್ ಮತ್ತಿತರರು ಹಾಜರಿದ್ದರು.
ರಮೇಶ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು.