ನ.9: ಮರಿಕ್ಕಳದಲ್ಲಿ ಬೇಕಲ್ ಉಸ್ತಾದರಿಗೆ ಹುಟ್ಟೂರ ಸನ್ಮಾನ
ಮೊಂಟೆಪದವು, ನ.8: ಮರಿಕ್ಕಳ ಜುಮಾ ಮಸ್ಜಿದ್, ಎಸ್.ವೈ.ಎಸ್. ಮತ್ತು ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅವರಿಗೆ ಹುಟ್ಟೂರ ಸನ್ಮಾನ ಹಾಗೂ ಯೂನಿಟ್ ಸಮ್ಮೇಳನವು ನ.9ರಂದು ಸಂಜೆ 6:30ಕ್ಕೆ ಮರಿಕ್ಕಳ ಜುಮಾ ಮಸೀದಿಯ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.
ಶೈಖುನಾ ಅಲಿಕುಂಞಿ ಉಸ್ತಾದ್ ಶಿರಿಯ ಅವರು ಬೇಕಲ್ ಉಸ್ತಾದರನ್ನು ಸನ್ಮಾನಿಸುವರು. ಶೈಖುನಾ ಅಬ್ಬಾಸ್ ಉಸ್ತಾದ್ ಅಧ್ಯಕ್ಷತೆ ವಹಿಸಲಿರುವರು. ಶೈಖುನಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸುವರು.
ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಅಭಿನಂದನಾ ಭಾಷಣ ಮಾಡಲಿರುವರು. ಮುನೀರ್ ಅಹ್ಮದ ಕಾಮಿಲ್ ಸಖಾಫಿ ಸಂದೇಶ ಭಾಷಣ ಮಾಡುವರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ.ಮೋನು ಹಾಜಿ ಕಣಚೂರು, ಎಸ್.ವೈ.ಎಸ್. ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು, ಮರಿಕ್ಜಳ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ, ಮುಹಿಯುದ್ದೀನ್ ಸಅದಿ ತೋಟಾಲ್ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮರಿಕ್ಕಳ ಜುಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.