ಕಸಾಪ ಕಾಪು ತಾಲೂಕು ಅಧ್ಯಕ್ಷರಾಗಿ ಪುಂಡಲೀಕ ಮರಾಠೆ
ಕಾಪು, ನ.8: ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಆಯ್ಕೆಯಾಗಿದ್ದಾರೆ.
ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಡುಪಿ ತಾಲೂಕು ಘಟಕದ ಅಧ್ಯಕ್ಷೆ ವಸಂತಿ ಶೆಟ್ಟಿ, ಜಿಲ್ಲಾ ಸಮಿತಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಕಾಪು ತಾಲೂಕು ಘಟಕದ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು.
ಗೌರವ ಕಾರ್ಯದರ್ಶಿಗಳಾಗಿ ವಿದ್ಯಾಧರ ಪುರಾಣಿಕ್ ಕಲ್ಯಾ, ವಿದ್ಯಾ ಅಮ್ಮಣ್ಣಾಯ ಕೊಪ್ಪಲಂಗಡಿ, ಕೋಶಾಧಿಕಾರಿಯಾಗಿ ಸತ್ಯಸಾಯಿ ಪ್ರಸಾದ್ ಬಂಟಕಲ್ಲು, ಮಹಿಳಾ ಪ್ರತಿನಿಧಿಯಾಗಿ ಮಮ್ತಾಝ್ ಬೇಗಂ ಬೆಳಪು, ಪರಿಶಿಷ್ಠ ಜಾತಿ ಪ್ರತಿನಿಧಿಯಾಗಿ ಸುದಕ್ಷಿಣೆ ಕುಂಜಾರುಗಿರಿ, ಸಮಿತಿ ಸದಸ್ಯರುಗಳಾಗಿ ಎಲ್ಲೂರು ಗಣೇಶ ರಾವ್, ಶಿವಾನಂದ ಕಾಮತ್ ಶಿರ್ವ, ಕೃಷ್ಣಕುಮಾರ್ ರಾವ್ ಮಟ್ಟು, ಪ್ರಜ್ಞಾ ಮಾರ್ಪಳ್ಳಿ ಮಜೂರು, ಹರೀಶ್ ಕಟ್ಪಾಡಿ, ದೆಂದೂರು ದಯಾನಂದ ಕೆ.ಶೆಟ್ಟಿ, ಆಲ್ವಿನ್ ದಾಂತಿ ಪೆರ್ನಾಲ್, ಕಸ್ತೂರಿ ರಾಮಚಂದ್ರ ಪಡುಬಿದ್ರೆ, ವಿಶೇಷ ಆಹ್ವಾನಿತರಾಗಿ ಕೆ.ಎಲ್.ಕುಂಡಂತಾಯ ಕುಂಜೂರು, ಪ್ರೊ.ವೈ.ಭಾಸ್ಕರ ಶೆಟ್ಟಿ, ಕ್ಯಾಥರಿನ್ ರೊಡ್ರಿಗಸ್ ಕಟಪಾಡಿ, ಹರೀಶ್ ಕುಮಾರ್ ಹೆಜಮಾಡಿ, ಮಂಜುನಾಥ ಆಚಾರ್ಯ ಪಣಿಯೂರು, ಪದ್ಮನಾಭ ನಾಯಕ್ ಮೂಡುಬೆಳ್ಳೆ ಇವರನ್ನು ಆಯ್ಕೆ ಮಾಡಲಾಯಿತು.